Kannada NewsLatest

ಬೆಳಗಾವಿ: ಒಡಹುಟ್ಟಿದ ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದು ಠಾಣೆಗೆ ಬಂದು ಶರಣಾದ ತಮ್ಮ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ತಮ್ಮನೊಬ್ಬ ಅಣ್ಣನನ್ನೇ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ತಮ್ಮ ಅಜ್ಮದ್ ಶೇಖ್ ಅಣ್ಣ ಅಕ್ಬರ್ ಶೇಖ್ ನನ್ನು ಕೊಲೆ ಮಾಡಿದ್ದಾನೆ. ಅಣ್ಣ ಅಕ್ಬರ್ ಶೇಖ್ ಕಬ್ಬೂರದಿಂದ ಬೈಕ್ ನಲ್ಲಿ ಚಿಕ್ಕೋಡಿಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಫಾಲೋ ಮಾಡಿಕೊಂಡು ಬಂದ ಅಜ್ಮದ್ ಕೆಲ ದೂರ ಹೋಗುತ್ತಿದ್ದಂತೆ ಬೈಕೆ ಹಿಂಬದಿಂದ ಕಾರು ಡಿಕ್ಕಿ ಹೊಡೆದಿದ್ದಾನೆ. ಕಾರು ಡಿಕ್ಕಿ ಹೊಡೆದು ಅಣ್ಣನನ್ನು ಬೈಕ್ ನಿಂದ ಬೀಳಿಸಿದ ಅಜ್ಮದ್, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

Home add -Advt

ನಂತರ ಚಿಕ್ಕೋಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಮೋಜು-ಮಸ್ತಿಗೆ ತೆರಳಿದ್ದ ಟೆಕ್ಕಿ ಕಿಡ್ನ್ಯಾಪ್ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

https://pragati.taskdun.com/teche-kidnap4-accusedarrested/

 

Related Articles

Back to top button