BusinessKannada NewsLatest

*ರಿಲಾಯನ್ಸ್ ಜಿಯೋ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಬಿಗ್ ಆಫರ್*

ಪ್ರಗತಿವಾಹಿನಿ ಸುದ್ದಿ: ರಿಲಾಯನ್ಸ್ ಜಿಯೋ ಗ್ರಾಹಕರಿಗೆ ರಿಚಾರ್ಜ್ ಕುರಿತಾದ ಬಿಗ್ ಪ್ಲಾನ್ ಘೋಷಿಸುವ ಮೂಲಕ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿದೆ.

ದೀರ್ಘಕಾಲೀನ ರೀಚಾರ್ಜ್ ಅಪ್​ಡೇಟ್‌ಗಳಿಂದ ಮುಕ್ತಿ ಪಡೆಯಲು ಬಯಸುವ ಬಳಕೆದಾರರನ್ನು ಇದು ಗುರಿಯಾಗಿಸಿದೆ. ಯಾವುದದು ಪ್ಲಾನ್, ಏನೆಲ್ಲ ಉಪಯೋಗ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ರಿಲಯನ್ಸ್ ಜಿಯೋ, ಗ್ರಾಹಕರಿಗಾಗಿ 10,000 ರೂ ಮೌಲ್ಯದ ಪ್ರೀಮಿಯಂ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಜಿಯೋದ 10,000 ರೂ ಪ್ಲಾನ್ ದೀರ್ಘಾವಧಿಯ ವ್ಯಾಲಿಡಿಟಿಯನ್ನು (Validity) ಹೊಂದಿದೆ. ಬಳಕೆದಾರರಿಗೆ ನಿರಂತರವಾಗಿ ಹೈ-ಸ್ಪೀಡ್ ಇಂಟರ್ನೆಟ್ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳ (Unlimited Voice Calls) ಪ್ರಯೋಜನವನ್ನು ಒದಗಿಸುತ್ತದೆ.

ದೈನಂದಿನ ಡೇಟಾ ಕೋಟಾ, ಎಸ್‌ಎಂಎಸ್ ಸೌಲಭ್ಯಗಳ ಜೊತೆಗೆ ಜಿಯೋದ ಅಧಿಕೃತ ಮನರಂಜನಾ ಆಪ್‌ಗಳಾದ ಜಿಯೋ ಸಿನಿಮಾ, ಜಿಯೋಟಿವಿ ಮುಂತಾದ ಸೇವೆಗಳಿಗೆ ಉಚಿತ ಚಂದಾದಾರಿಕೆ ಲಭ್ಯವಿರುತ್ತದೆ.

ಜಿಯೋ 10,000 ರೂ ಪ್ಲಾನ್ ಮೂರು ವರ್ಷ ವ್ಯಾಲಿಡಿಟಿ ಹೊಂದಿರುತ್ತದೆ. ಒಂದು ತಿಂಗಳಿಗೆ ಇದು 278 ರೂ ಆಗುತ್ತದೆ. ಪ್ರತೀ ದಿನ 2.5 ಜಿಬಿ ಡಾಟಾ ಸಿಗುತ್ತದೆ. ಜೊತೆಗೆ ಒಟಿಟಿ ಸಬ್​ಸ್ಕ್ರಿಪ್ಷನ್ ಕೂಡ ಇರುತ್ತದೆ.

10,000 ರೂ ಪ್ಲಾನ್​ನ ಫೀಚರ್ಸ್:
ವ್ಯಾಲಿಡಿಟಿ ಅವಧಿ ಮೂರು ವರ್ಷ (36 ತಿಂಗಳು)
ದಿನಕ್ಕೆ 2.5 ಜಿಬಿ ಡಾಟಾ
ದಿನಕ್ಕೆ 100 ಉಚಿತ ಎಸ್ಸೆಮ್ಮೆಸ್
ಜಿಯೋ ಹಾಟ್​ಸ್ಟಾರ್ ಮೊಬೈಲ್ ಸಬ್​ಸ್ಕ್ರಿಪ್ಷನ್
12 ತಿಂಗಳು ಕ್ಯಾನ್ವಾ ಪ್ರೋ ಲೈಟ್
50 ಜಿಬಿ ಜಿಯೋ ಎಐಕ್ಲೌಡ್ ಸ್ಟೋರೇಜ್

ಕ್ಯಾನ್ವಾ ಪ್ರೋ ಲೈಟ್​ನಲ್ಲಿ ಕ್ಯಾನ್ವಾದ ಡಿಸೈನ್ ಮತ್ತು ಕಂಟೆಂಟ್ ಕ್ರಿಯೇಶನ್ ಟೂಲ್​​ಗಳನ್ನು ಪಡೆಯಬಹುದು. ಇವು ಉತ್ಕೃಷ್ಟ ಗ್ರಾಫಿಕ್ಸ್ ಹಾಗೂ ವಿಡಿಯೋ ಕಂಟೆಂಟ್ ಸೃಷ್ಟಿಸಲು ಸಹಾಯವಾಗುತ್ತವೆ. ಇನ್ನು, ಕ್ಲೌಡ್ ಸ್ಟೋರೇಜ್​ನಲ್ಲಿ ನಿಮ್ಮ ಹಲವಾರು ಫೈಲ್​ಗಳು, ಫೋಟೋ, ವಿಡಿಯೋಗಳನ್ನು ಅನ್​ಲೈನ್​ನಲ್ಲಿ ಜೋಪಾನವಾಗಿ ಇಟ್ಟುಕೊಳ್ಳಬಹುದು.

Related Articles

Back to top button