Kannada NewsKarnataka News

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಬದುಕು ಸುಸಂಸ್ಕೃತ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಕ್ಕಿನಕೇರಿ ಗ್ರಾಮದಲ್ಲಿ ಗುರುವಾರ ಧ್ವಜ ಸ್ತಂಭವನ್ನು ಉದ್ಘಾಟಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ವಿಠ್ಠಲ ರುಕ್ಮಾಯಿ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾದರು. 
ನಮ್ಮ ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಭಕ್ತಿಪೂರ್ವಕ ಕಾರ್ಯಕ್ರಮಗಳು ಸದಾ ನಡೆಯುತ್ತ ಬಂದಿವೆ. ಇವು ಜನ ಜೀವನವನ್ನು, ಬದುಕನ್ನು ರೂಪಿಸಲು ಅತ್ಯಂತ ಮಹತ್ವದ್ದಾಗಿವೆ. ಇವುಗಳಿಂದಾಗಿಯೇ ನಮ್ಮ ಜನರು ಭಯ, ಭಕ್ತಿಯಿಂದ ಅತ್ಯಂತ ಸುಸಂಸ್ಕೃತ ಜೀವನ ಸಾಗಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನನಗೆ ಖುಷಿ ಎನಿಸುತ್ತದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸಾರ್ವಜನಿಕರು, ವಿಠ್ಠಲ ರುಕ್ಮಾಯಿ ಭಕ್ತಾಧಿಗಳು, ಮೃಣಾಲ ಹೆಬ್ಬಾಳಕರ್, ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು.
 ಕಟ್ಟಡ ಉದ್ಘಾಟನೆ
ಕ್ಷೇತ್ರದ ತುರಮುರಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಗ್ರಾಹಕರ ಸಹಕಾರಿ ಸಂಘದ ನೂತನ ಕಟ್ಟಡವನ್ನು ಗುರುವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಉದ್ಘಾಟಿಸಿದರು.
ಇದೇ ಕಟ್ಟಡಲ್ಲಿ ಆಹಾರ, ನಾಗರಿಕ ಸರಬುರಾಜು ಮತ್ತು ಗ್ರಾಹಕರ ವ್ಯವಹಾರಗಳ ಮಳಿಗೆಯನ್ನು ಸಹ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮೃಣಾಲ ಹೆಬ್ಬಾಳಕರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ವೈಶಾಲಿ ಕಾಂಡೇಕರ್, ಉಪಾಧ್ಯಕ್ಷ ಸಾಂಗದೇವ್ ಬೆಳಗಾಂವ್ಕರ್, ಸರ್ವ ಸದಸ್ಯರು, ವಿವೇಕಾನಂದ ಸೊಸೈಟಿಯ ಅಧ್ಯಕ್ಷ ಪುಣ್ಣಪ್ಪ ಕಾಂಬಳೆ, ಮಾರುತಿ, ರಾಮ ಕಾಂಡೇಕರ್, ನಾರಾಯಣ ಮೇಗೋಚಿ, ಬಾಳಾರಾಮ್ ಬೆಳಗುಂದ್ಕರ್, ಲಕ್ಷ್ಮಣ ಜಾಧವ್, ಅಶೋಕ ಜಾಧವ್, ಮಲ್ಲಪ್ಪ ಬಾನಗೆ ಹಾಗೂ ಸೊಸೈಟಿಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.
 
ಮಹಾಪ್ರಸಾದ ಕಾರ್ಯಕ್ರಮ
  ಕ್ಷೇತ್ರದ ಕಲ್ಲೇಹೋಳ ಗ್ರಾಮದಲ್ಲಿ ದಸರಾ ಉತ್ಸವ ಹಾಗೂ ಮಹಾನವಮಿಯ ಅಂಗವಾಗಿ ಹಮ್ಮಿಕೊಂಡ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮೃಣಾಲ ಹೆಬ್ಬಾಳಕರ್, ವಸಂತ ಪಾಟೀಲ, ರುಕ್ಮಣ್ಣ ಮರುಚೆ, ಪರುಶರಾಮ ಪಾಟೀಲ, ಮಹೇಶ ಪಾಟೀಲ, ಸುರಜ್ ಪಾಟೀಲ, ಮೊನಪ್ಪ ಮರುಚೆ, ಲಕ್ಷ್ಮಣ ಕಣಬರ್ಕರ್, ಸುರಜ್ ಶಹಾಪೂರ್ಕರ್, ಗೌಡು ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button