ಖೇಮಲಾಪುರವನ್ನು ಯಲ್ಪಾರಟ್ಟಿಗೇ ಸ್ಥಳಾಂತರಿಸಿ
ಪ್ರಗತಿವಾಹಿನಿ ಸುದ್ದಿ, ಖೇಮಲಾಪುರ – ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗುತ್ತಿರುವ ಖೇಮಲಾಪುರ ಗ್ರಾಮದ ಸಿದ್ಧಾರೂಢ ಮಠದ ವೇದಿಕೆಯಲ್ಲಿ ಗ್ರಾಮದ ಶಾಶ್ವತ ಸ್ಥಳಾಂತರ ಕುರಿತು ಸಭೆ ನಡೆಸಲಾಯಿತು.
ಖೇಮಲಾಪುರ ಗ್ರಾಮದ ಶಾಶ್ವತ ಸ್ಥಳಾಂತರ ಕುರಿತು ಜನರ ಅಭಿಪ್ರಾಯ ಕೇಳಿದರು.
ಗ್ರಾಮಸ್ಥರು ಸಮೀಪದ ಯಲ್ಪಾರಟ್ಟಿನೇ ಬೇಕೆ ಬೇಕು ಎಂದು ಕೂಗಿದರು. ಆ ಸ್ಥಳ ಬಿಟ್ಟು ಬೇರೆ ಸ್ಥಳಾಂತರ ಬೇಡ ಎಂದು ಜನರು ದೃಢವಾಗಿ ಹೇಳಿದರು. ಸೆಪ್ಟೆಂಬರ್ ತಿಂಗಳಿನಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗುತ್ತಿರುವ ಮನೆಗಳು ಬಿದ್ದಿವೆ. ತಾತ್ಕಾಲಿಕ ಶೆಡ್ಡಿನ ವ್ಯವಸ್ಥೆ ಮಾಡಬೇಕು ಎಂದು ಜನರು ಆಗ್ರಹಿಸಿದರು. ಜಾನುವಾರುಗಳಿಗೂ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಆದ ಅಧಿಸೂಚನೆ ಪ್ರಕಾರವೇ ಗ್ರಾಮ ಸ್ಥಳಾಂತರ ಮಾಡಬೇಕೆಂದು ಅಧಿಕಾರಿಗಳಿಗೆ ವಿನಂತಿಸಲು ಒಂದು ನಿಯೋಗದೊಂದಿಗೆ ತೆರಳಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾ ಪಂ ಅಧ್ಯಕ್ಷೆ ಉಷಾರಾಣಿ ಹೊನವಾಡೆ, ಉಪಾದ್ಯಾಕ್ಷ ಬಸವರಾಜ ನವಲ್ಯಾಳ, ಪಿ ಡಿ ಒ ಬಿ.ಎಸ್.ನಾಗನೂರ, ನೋಡಲ್ ಅಧಿಕಾರಿ ಶೈಲಾ ಕುರಣಿ, ಗ್ರಾಮ ಲೆಕ್ಕಾಧಿಕಾರಿ ಎ.ಎಲ್.ಠಕ್ಕನ್ನವರ, ಎಮ್.ಎಸ್ ಗಸ್ತಿ, ಗ್ರಾಮ ಮುಖಂಡರಾದ ಸುನೀಲಗೌಡ ಪಾಟೀಲ, ಗ್ರಾ ಪಂ ಸದಸ್ಯ ಶಶಿಧರ ಮೂಡಲಗಿ, ಸಾವಕ್ಕ ಬೆವನೂರ, ಸಿದ್ದಪ್ಪಾ ದುಪದಾಳ, ಸಿದ್ದಣ್ಣ ಗುಡೋಡಗಿ, ಸಿದ್ದು ಹಿಡಕಲ್ಲ, ಸಾತಪ್ಪಾ ಅಂಬಿ , ಎನ್.ಎನ್.ಚಿಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ