Film & Entertainment

*ನಟ ದರ್ಶನ್ ವಿಚಾರಣಾಧೀನ ಕೈದಿ: ನಂಬರ್ ವಿತರಿಸಿದ ಜೈಲಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್‌ ಜೈಲುಪಾಲಾಗಿದೆ.

ಈಗಾಗಲೇ ನಟ ದರ್ಶನ್ ಗ್ಯಾಂಗ್ ನ ಪವಿತ್ರಾ ಗೌಡ ಸೇರಿದಂತೆ 10 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಇಂದು ನಟ ದರ್ಶನ್ ಸೇರಿದಂತೆ ಉಳಿದ ನಾಲ್ವರು ಆರೋಪಿಗಳಿಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.

ಜೈಲಧಿಕಾರಿಗಳು ನಟ ದರ್ಶನ್‌ಗೆ ವಿಚಾರಣಾಧೀನ ಕೈದಿ ನಂಬರ್ 6106 ಸಂಖ್ಯೆ ಹಂಚಿದ್ದಾರೆ. ಅಲ್ಲದೇ ಹೆಚ್ಚಿನ ಭದ್ರತೆಗೆ ದರ್ಶನ್ ನನ್ನು ಬಿ ಬ್ಯಾರಕ್‌ನಲ್ಲಿ ಇರಿಸಲಾಗಿದೆ.

Home add -Advt

ಎ9 ಧನರಾಜ್ ಗೆ ವಿಚಾರಣಾಧೀನ ಕೈದಿ ನಂಬರ್ 6107, ಎ10 ವಿನಯ್ ವಿಚಾರಣಾಧೀನ ಕೈದಿ ನಂಬರ್ 6108, ಎ14 ಪ್ರದೋಶ್ ವಿಚಾರಣಾಧೀನ ಕೈದಿ ನಂಬರ್ 6109 ನೀಡಲಾಗಿದೆ.


Related Articles

Back to top button