Karnataka News

*ರೇಣುಕಾಸ್ವಾಮಿ ಕೈ ಮುಗಿದು ಕಣ್ಣೀರಿಟ್ಟು ಅಂಗಲಾಚಿದ್ದ ಫೋಟೋ ವೈರಲ್*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈ ನಡುವೆ ರೇಣುಕಾಸ್ವಾಮಿಗೆ ನಟ ದರ್ಶನ್ ಹಾಗೂ ಗ್ಯಾಂಗ್ ನೀಡಿರುವ ಚಿತ್ರಹಿಂಸೆಯ ಫೋಟೋ ವೈರಲ್ ಆಗಿದೆ.

ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕಿಡ್ನ್ಯಾಪ್ ಮಾಡಿ ಬೆಂಗಳೂರಿನ ಆರ್.ಆರ್.ನಗರದ ಪಟ್ಟಣಗೆರೆ ಶೆಡ್ ನಲ್ಲಿ ಕೂಡಿಟ್ಟು, ರೇಣುಕಾಸ್ವಾಮಿಗೆ ವಿವಿಧ ರೀತಿ ಚಿತ್ರಹಿಂಸೆ ನೀಡಿದ್ದು, ರೇಣುಕಾಸ್ವಾಮಿ ಕೈಮುಗಿದು, ಕಣ್ಣೀರಿಟ್ಟು ತನ್ನನ್ನು ಬಿಟ್ಟುಬಿಡುವಂತೆ ಬೇಡಿಕೊಂಡರೂ ಆತನನ್ನು ಬಿಡಲಿಲ್ಲ.

Home add -Advt

ರೇಣುಕಾಸ್ವಾಮಿ ಕೈಮುಗಿದು, ಕಣ್ಣೀರಿಡುತ್ತಿರುವ ಫೋಟೋ ಲಭ್ಯವಾಗಿದ್ದು, ಫೋಟೋ ನೋಡಿದರೆ ಕರಳು ಹಿಂಡುವಂತಿದೆ. ಅಮಾನುಷವಾಗಿ ವರ್ತಿಸಿ ಆತನಿಗೆ ಹಿಂಸಿಸಿರುವುದು ಬೆಳಕಿಗೆ ಬಂದಿದೆ. ಅದನ್ನು ಫೋಟೋ ತೆಗೆದ ದರ್ಶನ್ ಹಾಗೂ ಗ್ಯಾಂಗ್ ವಿಕೃತ ಆನಂದ ಅನುಭವಿಸಿದ್ದಾರೆ

ರೇಣುಕಾಸ್ವಾಮಿಗೆ ನೀಡಿದ್ದ ಟಾರ್ಚರ್, ಚಿತ್ರಹಿಂಸೆ, ಕರೆಂಟ್ ಶಾಕ್ ನಿಂದಾಗಿಯೇ ಆತ ಸಾವನ್ನಪ್ಪಿರುವುದು ದೃಢವಾಗಿದೆ.

Related Articles

Back to top button