Karnataka NewsLatest

*ದೊಡ್ಡ ನಟನಾಗಿ ಏನು ಪ್ರಯೋಜನ? ಎಳ್ಳುಕಾಳಿನಷ್ಟೂ ಮನುಷತ್ವ ಇಲ್ಲವಲ್ಲ; ದರ್ಶನ್ ಕ್ರೌರ್ಯಕ್ಕೆ ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್ ನಲ್ಲಿ ಕೂಡಿಟ್ಟು ಕಟ್ಟಿಹಾಕಿ ಚಿತ್ರ ಹಿಂಸೆ ನೀಡಿರುವ ನಟ ದರ್ಶನ್ ಹಾಗೂ ಗ್ಯಾಂಗ್ ನ ಕ್ರೌರ್ಯದ ಫೋಟೊ ವೈರಲ್ ಆಗಿದ್ದು, ರೇಣುಕಾಸ್ವಾಮಿ ಕಣ್ಣೀರಿಟ್ಟು ಪರಿ ಪರಿಯಾಗಿ ಬೇಡಿಕೊಂಡರೂ ಬಿಡದೆ ಚಿತ್ರ ಹಿಂಸೆ ನೀಡಿ ಕೊಂದುಹಾಕಿದ್ದಾರೆ. ರೇಣುಕಾಸ್ವಾಮಿಯ ಕೊನೇ ಫೋಟೋಗಳು ವೈರಲ್ ಆಗುತ್ತಿದ್ದಂತೆ ರೇಣುಕಾಸ್ವಾಮಿ ತಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ, ನನ್ನ ಮಗನಿಗಾದ ನೋವು ಅವರಿಗೂ ಆಗಬೇಕು. ದರ್ಶನ್ ಹಾಗೂ ಗ್ಯಾಂಗ್ ಗೆ ಕಠಿಣ ಶಿಕ್ಷೆಯಾಗಬೇಕು. ಚಿತ್ರ ಹಿಂಸೆಗೆ ನನ್ನ ಮಗ ಅಂಗಲಾಚಿ ಬೇಡಿಕೊಂಡು, ಕಿರುಚುತ್ತಿದ್ದರೂ ಬಿಡದೇ ಕೊಂದಿದ್ದಾರೆ. ಪರಿ ಪರಿ ಹಿಂಸೆ ನೀಡಿ ಸಾಯಿಸಿದ್ದಾರೆ. ಆತನ ಕೊನೇ ಕ್ಷಣಗಳನ್ನು ನೋಡಿ ತಡೆದುಕೊಳ್ಳಲಾಗುತ್ತಿಲ್ಲ ಎಂದು ಗೋಗರೆದಿದ್ದಾರೆ.

ಅಲ್ಲಿರುವ ಯಾರಿಬ್ಬರಿಗೂ ಮನುಷತ್ವ ಇರಲಿಲ್ಲವೇ? ಮನುಷ್ಯನಾಗಿ ಹುಟ್ಟಿ ರಾಕ್ಷರಂತೆ ನಡೆದುಕೊಂಡಿದ್ದಾರೆ. ಅಷ್ಟು ದೊಡ್ಡ ನಟನಾಗಿ ಏನು ಬಂತು? ನಟನೆ ಮಾಡಿ ಹೆಸರು ಮಡಿದರೆ ಏನು ಪ್ರಯೋಜನ? ಎಳ್ಳು ಕಳಿನಷ್ಟು ಮನುಷತ್ವ ಮಾನವೀಯತೆ ಎಂಬುದೂ ಇಲ್ಲವಲ್ಲ. ಇಂತಹ ಕ್ರೂರ ರಾಕ್ಷಸರೂ ಸಮಾಜದಲ್ಲಿದ್ದಾರೆ ಎಂಬುದನ್ನು ಇಡೀ ರಾಜ್ಯದ ಜನತೆ ಪ್ರತಿದಿನ ನೋಡುತ್ತಿದ್ದಾರೆ. ದಿನದಿಂದ ದಿನಕ್ಕೆ ನಮ್ಮ ಆರೋಗ್ಯವೂ ಕೆಡುತ್ತಿದೆ. ಕಣ್ಣೀರಲ್ಲೇ ಕೈತೊಳೆಯುತ್ತಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ.


Home add -Advt

Related Articles

Back to top button