
ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ & ಗ್ಯಾಂಗ್ ಜೈಲು ಸೇರಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ಲಿಪ್ ಸ್ಟಿಕ್ ಹಚ್ಚಲು ನೀಡಿದ್ದ ಮಹಿಳಾ ಪಿಎಸ್ ಐಗೆ ಇದೀಗ ಸಂಕಷ್ಟ ಎದುರಾಗಿದೆ. ಹತ್ಯೆ ಪ್ರಕರಣದ ಸ್ಥಳ ಮಹಜರು ವೇಳೆ ವಿಜಯನಗರ ಮಹಿಳಾ ಪಿಎಸ್ ಐ ಆರೋಪಿ ಪವಿತ್ರಾಗೆ ಲಿಪ್ ಸ್ಟಿಕ್ ನೀಡಿದ್ದರಂತೆ. ಈ ಹಿನ್ನೆಲೆಯಲ್ಲಿ ಪಿಎಸ್ ಐಗೆ ನೋಟಿಸ್ ನೀಡಲಾಗಿದೆ.
ಜೂನ್ 15ರಂದು ಆರೋಪಿ ಪವಿತ್ರಾ ಗೌಡಳನ್ನು ಆರ್.ಆರ್.ನಗರದ ಮನೆಗೆ ಸ್ಥಳ ಮಹಜರಿಗೆ ಕೊಂಡೊಯ್ಯಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಲಿಪ್ ಸ್ಟಿಕ್ ಹಚ್ಚಿಕೊಂಡು, ಮೇಕಪ್ ಮಾಡಿಕೊಂಡು ಹೊರ ಬಂದಿದ್ದರು. ಪವಿತ್ರಾಗೌಡಗೆ ಲಿಪ್ ಸ್ಟಿಕ್ ನೀಡಿದ್ದ ವಿಜಯನಗರ ಠಾಣೆ ಮಹಿಳಾ ಪಿಎಸ್ ಐಗೆ ಇದೀಗ ಕರ್ತವ್ಯ ಲೋಪ ಆರೋಪದಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ನೋಟಿಸ್ ನೀಡಿದ್ದಾರೆ.