Latest

ರೇಪೋದರ ಇಳಿಕೆ

ಮುಂಬೈ:

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋದರದಲ್ಲಿ ಮೂಲಾಂಕ ಇಳಿಕೆ ಮಾಡಿದೆ. ಇದರಿಂದಾಗಿ ರೆಪೋ ದರ ಶೇ.6ರಿಂದ 5.75ಕ್ಕೆ ಇಳಿಕೆಯಾಗಿದೆ.

ಆರ್ ಟಿಜಿಎಸ್ ಮತ್ತು ನೆಫ್ಟ್ ಶುಲ್ಕಗಳನ್ನೂ ಆರ್ ಬಿಐ ರದ್ದುಗೊಳಿಸಿದೆ. ಈ ಸೌಲಭ್ಯವನ್ನು ಗ್ರಾಹಕರಿಗೆ ತಲುಪಿಸಲು ಎಲ್ಲ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚಿಸಿದೆ.
ಆರ್ ಬಿಐ ಕಳೆದ ನಾಲ್ಕು ತಿಂಗಳಲ್ಲಿ ಮೂರು ಬಾರಿ ರೆಪೋ ದರವನ್ನು ಇಳಿಕೆ ಮಾಡಿದೆ. ಆದರೂ ಬ್ಯಾಂಕ್ ಗಳು ಈ ಸೌಲಭ್ಯವನ್ನು ಗ್ರಾಹಕರಿಗೆ ತಲುಪಿಸಿರಲಿಲ್ಲ. ಹಾಗಾಗಿ, ಈಗಲಾದರೂ ಬ್ಯಾಂಕ್ ಗಳು ರೆಪೋ ದರ ಇಳಿಕೆಯ ಸೌಲಭ್ಯವನ್ನು ಗ್ರಾಹಕರಿಗೆ ತಲುಪಿಸಿ, ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬಹುದು ಎನ್ನುವುದು ಗ್ರಾಹಕರ ನಿರೀಕ್ಷೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button