Kannada NewsKarnataka NewsLatestPolitics

*77ನೇ ಗಣರಾಜ್ಯೋತ್ಸವ: ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ*

ಪ್ರಗತಿವಾಹಿನಿ ಸುದ್ದಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲಿಯೂ ಗಣರಾಜ್ಯೋತ್ಸವದ ಸಡಗರ ಎಲ್ಲೆಡೆ ಕಂಡುಬರುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದ್ದಾರೆ..

ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿ, ತೆರೆದ ಜೀಪ್ ನಲ್ಲಿ ಸಾಗಿ ಪೊಲೀಸ್ ಪಡೆ, ಸೇನಾ ಸಿಬ್ಬಂದಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಇದೇ ವೇಳೆ ನಡೆದ ಪಥಸಂಚನ ಕಾರ್ಯಕ್ರಮ ಮನಸೂರೆಗೊಂಡಿತು, ಪೊಲೀಸ್, ಸೇನೆ, ಅರೆ ಸೇನಾಪಡೆ, ಸ್ಕೌಟ್, ಗೈಡ್ಸ್, ಎನ್ ಸಿಸಿ, ಸೇವಾದಳ, ಶಾಲಾ ಮಕ್ಕಳು ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು. ಈ ಬಾರಿ ಕವಾಯಿತಿನಲ್ಲಿ ತಮಿಳಿನಾಡು ಪೊಲೀಸರು ಭಾಗಿಯಾಗಿರುವುದು ವಿಶೇಷ. 1,400 ಶಾಲಾ ಮಕ್ಕಳು ಪಥಸಂಚನದಲ್ಲಿ ಭಾಗಿಯಾದರು.

Home add -Advt

Related Articles

Back to top button