ಪ್ರಗತಿವಾಹಿನಿ ಸುದ್ದಿ: 76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದ ಕೆಲ ಸಮಯದಲ್ಲೇ ಬೃಹತ್ ತ್ರಿವರ್ಣ ಧ್ವಜ ಧ್ವಜಸ್ತಂಭದಿಂದ ಕುಸಿದು ಬಿದ್ದ ಘಟನೆ ವಿಜಯನಗರದಲ್ಲಿ ನಡೆದಿದೆ.
ದೇಶದ ಎರಡನೇ ಅತಿ ಎತ್ತರದ ದ್ವಜಸ್ತಂಭ ಎಂದೇ ಖ್ಯಾತಿ ಪಡೆದಿರುವ ವಿಜಯನಗರದ ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿರುವ ಧ್ವಜಸ್ತಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಚಿವ ಜಮೀರ್ ಅಹ್ಮದ್ ಇಂದು ಸಾಂಕೇತಿಕವಾಗಿ ಧ್ವಜಾರೀಹಣ ನೆರವೇರಿಸಿದ್ದರು. ಧ್ವಜಾರೋಹಣದ ಬಳಿಕ ಪರೇಡ್ ವೀಕ್ಷಿಸಿ, ಸಚಿವರು ಗೌರವ ವಂದನೆ ಸ್ವೀಕರಿಸುತ್ತಿದ್ದರು.
ಈ ವೇಳೆ ಬೃಹತ್ ಧ್ವಜಸ್ತಂಭದಲ್ಲಿದ್ದ ಬೃಹತ್ ತ್ರಿವರ್ಣ ಧ್ವಜ ಏಕಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ. ಈ ವೇಳೆ ಗರಂ ಆದ ಸಚಿವರು ಧ್ವಜಸ್ತಂಭದಿಂದ ಧ್ವಜ ಬೀಳುವಂತೆ ಧ್ವಜ ಕಟ್ಟಿದ್ದು, ಇದಕ್ಕೆ ಕರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ