ಪ್ರವಾಹದ ಮಧ್ಯೆ ಸಿಲುಕಿದ್ದ ದಂಪತಿ ರಕ್ಷಣೆ
ಪ್ರಗತಿವಾಹನಿ ಸುದ್ದಿ, ಬೆಳಗಾವಿ –
48 ಗಂಟೆಗಳಿಗೂ ಹೆಚ್ಚಿನ ಕಾರ್ಯಾಚರಣೆಯ ನಂತರ ಪ್ರವಾಹದ ಮಧ್ಯೆ ಸಿಲುಕಿಕೊಂಡಿದ್ದ ದಂಪತಿಯನ್ನು ರಕ್ಷಿಸಲಾಗಿದೆ. ಸುಳೇಭಾವಿ ಹಾಗೂ ಮುಚ್ಚಂಡಿ ಗ್ರಾಮಗಳ ಮಧ್ಯದಲ್ಲಿರುವ ಕಬಲಾಪೂರ ಗ್ರಾಮದಲ್ಲಿ ಮನೆಯೊಂದು ಜಲಾವೃತವಾಗಿ, ದಂಪತಿ ಸಿಕ್ಕುಕೊಂಡಿದ್ದರು. ಆದರೆ ಮನೆಯೂ ಬಿದ್ದುಹೋಗಿದ್ದರಿಂದ ದಂಪತಿ ಹಗ್ಗ ಕಟ್ಟಿಕೊಂಡು ಗಿಡ ಏರಿ ಕುಳಿತುಕೊಂಡಿದ್ದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಶಾಸಕ ಸತೀಶ್ ಜಾರಕಿಹೊಳಿ ಸ್ಥಳದಲ್ಲೇ ಬೀಡುಬಿಟ್ಟು ದಂಪತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಂಪತಿಯ ಹೆಸರು ಕಾಡಪ್ಪ ಮತ್ತು ರತ್ನವ್ವ. ಹಲವಾರು ರೀತಿಯ ಕಾರ್ಯಚರಣೆಯೂ ಫಲನೀಡಿರಲಿಲ್ಲ. ಸೇನಾಪಡೆ, ಹೆಲಿಕಾಪ್ಟರ್ ಸಿಬ್ಬಂದಿ ಸಹ ಕೈಚೆಲ್ಲಿದ್ದರು. ಅಂತಿಮವಾಗಿ ಎನ್.ಡಿ.ಆರ್.ಎಫ್. ಸಿಬ್ಬಂದಿ ದಂಪತಿಯನ್ನು ಬೋಟ್ ಮೂಲಕವೇ ರಕ್ಷಿಸಿ ಹೊರಗೆ ತಂದಿದ್ದಾರೆ.
ದಂಪತಿಯ ಮೈಮೇಲಿನ ಬಟ್ಟೆಗಳೆಲ್ಲ ಹರಿದುಹೋಗಿದ್ದವು. ಜೋರಾಗಿ ನಡುಗುತ್ತಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿದೆ. ಲಕ್ಷ್ಮಿ ಹೆಬ್ಬಾಳಕರ್ ದಂಪತಿಗೆ ಧೈರ್ಯತುಂಬಿ ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದರು.
ಇದನ್ನೂ ಓದಿ –ಪ್ರವಾಹದ ಮಧ್ಯೆ ಸಿಕ್ಕಿ, ಗಿಡ ಏರಿಕೊಂಡಿರುವ ದಂಪತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ