ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಂಚಮಸಾಲಿ ಸಮಾಜ ಹಾಗೂ ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಪಂಚಮಸಾಲಿ ಸಮಾಜ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.
ಪಂಚಮಸಾಲಿ ಸಮುದಾಯವನ್ನು ಹೊಸದಾಗಿ 2ಎ ಹಾಗೂ 2ಡಿ ಎಂದು ಕ್ಯಾಟಗರಿ ಮಾಡಲಾಗಿದ್ದು, ಒಕ್ಕಲಿಗರಿಗೆ 2ಸಿ ಕ್ಯಾಟಗರಿ ಮಾಡಲಾಗಿದೆ. ಅಂದರೆ ಲಿಂಗಾಯಿತ, ಒಕ್ಕಲಿಗರಿಗೆಂದೇ ಪ್ರತ್ಯೇಕ ಕ್ಯಾಟಗರಿ ಮಾಡಲಾಗಿದೆ. ಮೀಸಲಾತಿ ಎಷ್ಟು ಪ್ರಮಾಣ ಎಂಬುದನ್ನು ನಂತರ ಘೋಷಿಸಲಾಗುವುದು ಎಂದು ಹೇಳಿದರು.
2A ಮೀಸಲಾತಿ ಕೇಳಿದ್ದ ಪಂಚಮಸಾಲಿ ಸಮುದಾಯಕ್ಕೆ 2D ಕ್ಯಾಟಗರಿ ರಚನೆ ಇದುವರೆಗೆ 3B ಕ್ಯಾಟಗರಿಯಲ್ಲಿದ್ದ ಲಿಂಗಾಯಿತರಿಗೆ 2D ಕ್ಯಾಟಗರಿ ರಚಿಸಲು ತೀರ್ಮಾನ. 2Aನಲ್ಲಿರುವ 102 ಪಂಗಡಗಳ ಮೀಸಲಾತಿ ಟಚ್ ಮಾಡುವುದಿಲ್ಲ. ಇನ್ನು 3Aನಲ್ಲಿದ್ದ ಒಕ್ಕಲಿಗರಿಗೆ ಹೊಸದಾಗಿ 2ಸಿ ಕ್ಯಾಟಗರಿ ರಚನೆ ಮಾಡಲು ನಿರ್ಧರಿಸಲಾಗಿದೆ.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ:
2A ಮೀಸಲಾತಿ ಕೇಳಿದ್ದ ಪಂಚಮಸಾಲಿ ಸಮುದಾಯಕ್ಕೆ 2D ಕ್ಯಾಟಗರಿ ರಚನೆ ಮಾಡಿದ್ದಾರೆ. ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಗೊಂದಲಗಳಿವೆ, ಸ್ಪಷ್ಟ ಮಾಹಿತಿ ಇಲ್ಲ. ನೇರವಾಗಿ 2A ಮೀಸಲಾತಿ ನೀಡುತ್ತಾರೆ ಎಂಬ ಭರವಸೆ ಇತ್ತು. ಸರ್ಕಾರದ ಮಾಹಿತಿ ಬಂದ ಬಳಿಕ ಮುಂದಿನ ನಡೆ ಬಗ್ಗೆ ಮುಖಂಡರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ. ಅಲ್ಲಿಯವರೆಗೂ ಯಾರೂ ಯಾವುದೇ ತೀರ್ಮಾನ ಪ್ರಕಟಿಸಬಾರದು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಪಂಚಮಸಾಲಿ ಸಮಾಜದವರು ಮೀಸಲಾತಿಗಾಗಿ ಕಳೆದ 2 ವರ್ಷದಿಂದ ಭಾರಿ ಹೋರಾಟ ನಡೆಸಿದ್ದರು. ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆದಿತ್ತು.
*ಪಂಚಮಸಾಲಿ ದಿಗ್ವಿಜಯ: ಕೆಲವೇ ಕ್ಷಣಗಳಲ್ಲಿ ಶೇ.4 ಮೀಸಲಾತಿ ಘೋಷಿಸಲಿರುವ ಸಿಎಂ?*
https://pragati.taskdun.com/panchmasali-digvijaya-cm-who-will-announce-4-reservation-in-a-few-moments/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ