ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸ್ಮಾಟ್ ಸಿಟಿ ಮತ್ತು ಮಹಾನಗರ ಪಾಲಿಕೆ ಅನುಧಾನದಡಿಯಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಪರಿಶೀಲನೆ ಸಭೆ ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಭೆಯಲ್ಲಿ ಹೆಸ್ಕಾಂ, ಕೆಯುಡಬ್ಲ್ಯುಎಸ್, ಅರಣ್ಯ ಇಲಾಖೆ, ಪೊಲೀಸ್, ಗ್ಯಾಸ್ ಪೈಪ್ ಲೈನ್, ದೂರವಾಣಿ ಇಲಾಖೆ, ಹೀಗೆ ಸಂಬಂಧ ಪಟ್ಟ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.
ಈಗಾಗಲೇ, “ಸ್ಮಾಟ್ ಸಿಟಿ ಯೋಜನೆಯಡಿಯಲ್ಲಿ ಪ್ರಾರಂಭಗೂಂಡಿರುವ ಕಾಮಗಾರಿಗಳಾದ ರಸ್ತೆ, ಚರಂಡಿ, ಒಳಚರಂಡಿ ನಿರ್ಮಾಣ, ಪೆವರ್ಸ್ ಅಳವಡಿಕೆ, ಯು ಜಿ. ಕೇಬಲ್ ಅಳವಡಿಕೆ, ಲೈಟ್ಸ್, ವಾಟರ್ ಪೈಪ್ ಲೈನ್ ಹೀಗೆ, ಅಪೂರ್ಣವಾಗಿ ಉಳಿದಿರುವ ಕಾಮಗಾರಿಗಳಿಗೆ ಪುನಃ ಚಾಲನೆ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು .
ಮಹಾನಗರ ಪಾಲಿಕೆಯ ಅನುಧಾನದಡಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದ ಕಾಮಗಾರಿಗಳನ್ನು ಕೂಡ ಕೂಡಲೇ ಪ್ರಾರಂಭಿಸಬೇಕು, ಒಟ್ಟಾರೆ, ” ಲಾಕ್ ಡೌನ್ ” ಹಿನ್ನೆಲೆಯಲ್ಲಿ ನಿಂತಿರುವ ಬೆಳಗಾವಿ ನಗರ ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆಎಚ್ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ