Latest

ನಿವೃತ್ತ ಡಿವೈಎಸ್ ಪಿಗೆ 4 ವರ್ಷ ಜೈಲು ಶಿಕ್ಷೆ

ಪ್ರಗತಿವಾಹಿನಿ ಸುದ್ದಿ; ತುಮಕೂರು: ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್ ಪಿ ಟಿ.ಆರ್.ಕೃಷ್ಣಮೂರ್ತಿ ಅವರಿಗೆ 4 ವರ್ಷ ಜೈಲುಶಿಕ್ಷೆಯಾಗಿದೆ.

ತುಮಕೂರಿನ ನಿವೃತ್ತ ಡಿವೈಎಸ್ ಪಿ ಕೃಷ್ಣಮೂರ್ತಿ, ತಮ್ಮ ಸೇವಾವಧಿಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. 2011ರಲ್ಲಿ ಕೃಷ್ಣಮೂರ್ತಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಬರೋಬ್ಬರಿ 10 ವರ್ಷಗಳ ಕಾಲ ವಿಚಾರಣೆ ನಡೆದಿತ್ತು.

ಸುದೀರ್ಘ ವಿಚಾರಣೆ ಬಳಿಕ ಇದೀಗ ಕೋರ್ಟ್ ಕೃಷ್ಣಮೂರ್ತಿಯವರಿಗೆ 4 ವರ್ಷ ಜೈಲುಶಿಕ್ಷೆ ಹಾಗೂ 17 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

Related Articles

Back to top button