Latest

ಕಡತ ವಿಲೇವಾರಿ ಸಪ್ತಾಹ ಯಶಸ್ವಿ : ಸಚಿವ ಆರ್.ವಿ.ದೇಶಪಾಂಡೆ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದ ಕಡತಗಳನ್ನು ಶೀಘ್ರವಾಗಿ ವಿಲೇ ಮಾಡುವ ದೃಷ್ಠಿಯಿಂದ ಕಂದಾಯ ಇಲಾಖೆಯು ಜೂನ್ರ 24ರಿಂದ 30ರ ವರೆಗೆ ಹಮ್ಮಿಕೊಂಡಿದ್ದ ಕಡತ ವಿಲೇವಾರಿ ಸಪ್ತಾಹ ಯಶಸ್ವಿಯಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಕಡತ ವಿಲೇವಾರಿ ಸಪ್ತಾಹದ ಕೊನೆಯ ದಿನವಾದ ಇಂದು ವಿಧಾನಸೌಧದ ತಮ್ಮ ಕಛೇರಿಯಲ್ಲಿ ಕಡತಗಳ ವಿಲೇವಾರಿಯಲ್ಲಿ ತೊಡಗಿದ್ದ ಸಚಿವರು ಸುದ್ಧಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದ ಕಂದಾಯ ಮಂತ್ರಿಗಳ ಕಛೇರಿಯಿಂದ ಹಿಡಿದು ಗ್ರಾಮಲೆಕ್ಕಿಗರ ಕಛೇರಿಯವರೆಗೂ ಕಂದಾಯ ಇಲಾಖೆಯ ಎಲ್ಲಾ ವಿಭಾಗಗಳು ಎಂದಿನಂತೆ ಇಂದೂ ಸಹ ಕಾರ್ಯನಿರ್ವಹಿಸಲು ಆದೇಶಿಸಲಾಗಿದ್ದು, ಇದರಿಂದಾಗಿ ಕಡತಗಳ ಶೀಘ್ರ ವಿಲೇಗೆ ಅನುಕೂಲವಾಗಿದೆ ಎಂದಿದ್ದಾರೆ.

ಜಸ್ಟೀಸ್ ಡಿಲೇಡ್ ಈಸ್ ಜಸ್ಟೀಸ್ ಡಿನೇಡ್ ಎಂಬ ಆಂಗ್ಲ ಉಕ್ತಿಯನ್ನು ಉಲ್ಲೇಖಿಸಿದ ಸಚಿವರು ಕಡತಗಳ ಶೀಘ್ರ ವಿಲೇವಾರಿಯಿಂದ ಸಾಮಾನ್ಯರಿಗೆ ಶೀಘ್ರ ನ್ಯಾಯ ದೊರಕಲಿದೆ. ಹಾಗಾಗಿ, “ಈ ಅವಧಿಯಲ್ಲಿ ಸಾಮಾನ್ಯ ಕಡತಗಳ ಜೊತೆಗೆ ವಿಶೇಷವಾಗಿ ದೀರ್ಘ ಕಾಲದಿಂದ ಬಾಕಿ ಉಳಿದ ಕಡತಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ ಮತ್ತು ಕಡತಗಳ ಶೀಘ್ರ ವಿಲೇವಾರಿಯಲ್ಲಿ ಕಡ್ಡಾಯವಾಗಿ ಪಾರದರ್ಶಕತೆ ಹಾಗೂ ನಿಯಮಪಾಲನೆಯನ್ನು ಕಾಯ್ದುಕೊಳ್ಳಲು ಎಲ್ಲಾ ಇಲಾಖಾ ಮುಖ್ಯಸ್ಥರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಇತರೇ ಅಧಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ಸಚಿವರು ವಿವರಿಸಿದ್ದಾರೆ.
ಈ ಹಿಂದೆಯೂ ಸಹ ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ನವೆಂಬರ್ 12ರಿಂದ 18 ರವರೆಗೆ ಕಡತ ವಿಲೇವಾರಿ ಸಪ್ತಾಹ ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ ಇಲಾಖೆಯ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ಪ್ರಯುಕ್ತ ಸಪ್ತಾಹದ ಅವಧಿಯಲ್ಲಿ ರಾಜ್ಯಾದ್ಯಂತ 2.50 ಲಕ್ಷಕ್ಕೂ ಅಧಿಕ ಕಡತಗಳನ್ನು ವಿಲೇಗೊಳಿಸಲಾಗಿರುತ್ತದೆ. ಈ ಕ್ರಮದಿಂದ ಪ್ರೇರೇಪಿತವಾದ ಇಲಾಖೆ ಮತ್ತೊಮ್ಮೆ ಈ ’ಸಪ್ತಾಹವನ್ನು’ ಈಗ ಆಚರಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Home add -Advt

ಸಪ್ತಾಹದ ಕೊನೆಯ ದಿನದನಂತರ ಎಲ್ಲಾ ಅಧಿಕಾರಿಗಳು ಸಪ್ತಾಹದ ಆರಂಭದಲ್ಲಿ ಬಾಕಿ ಇದ್ದ ಕಡತಗಳು, ಸಪ್ತಾಹದ ಅವಧಿಯಲ್ಲಿ ವಿಲೇ ಮಾಡಲಾದ ಮತ್ತು ಅಂತ್ಯದಲ್ಲಿ ಬಾಕಿ ಇರುವ ಕಡತಗಳ ವಿವರವನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದು ಕಡತ ವಿಲೇವಾರಿ ಸಪ್ತಾಹದಲ್ಲಿ ವಿಲೇಯಾದ ಕಡತಗಳ ನಿಖರ ಮಾಹಿತಿ ಇನ್ನೆರಡು ದಿನಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ಸಪ್ತಾಹ: ಸಚಿವ ದೇಶಪಾಂಡೆ

Revenue Department to Observes File Disposal Week

Related Articles

Back to top button