ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದ ಘೋಡೆ ಗಲ್ಲಿ ನಿವಾಸಿ, ನಿವೃತ್ತ ಶಿಕ್ಷಕ ರವೀಂದ್ರ ಗೋಪಾಳ ಕುಲಕರ್ಣಿ (64) ಬುಧವಾರ ಗೋವಾ ರಾಜ್ಯದ ಪಣಜಿಯಲ್ಲಿ ನಿಧನರಾದರು.
ಅವರು 3 ದಶಕಗಳ ಕಾಲ ತಾಲೂಕಿನ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕ ವೃತ್ತಿ
ನಿರ್ವಹಿಸಿದ್ದರು. ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಬಳಿಕ ಗೋವಾದಲ್ಲಿರುವ ತಮ್ಮ
ಪುತ್ರನ ಮನೆಯಲ್ಲಿ ನೆಲೆಸಿದ್ದರು. ಮೃತರಿಗೆ ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು
ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವಿದೆ.
ಈ ಭಾಗದಲ್ಲಿ ಅವರು ಆರ್.ಜಿ ಕುಲಕರ್ಣಿ ಎಂದೇ ಚಿರಪರಿಚಿತರಾಗಿದ್ದ ಮೃತರು 2 ದಶಕಗಳಿಗೂ ಹೆಚ್ಚಿನ ಕಾಲ ರಾಜ್ಯ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯದ ಕನ್ನಡ ಭಾಷೆಯ ಪಠ್ಯಕ್ರಮವನ್ನು ಮರಾಠಿ ಮಾಧ್ಯಮಕ್ಕೆ ಅನುವಾದಿಸುವ ಮೂಲಕ ಅನುವಾದಕರಾಗಿಯೂ ಕಾರ್ಯವನ್ನು ನಿರ್ವಹಿಸಿದ್ದರು. ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಉತ್ತಮ ಅನುವಾದಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದರು.
ಆರ್.ಜಿ ಕುಲಕರ್ಣಿ ಅವರ ನಿಧನಕ್ಕೆ ಶಾಸಕಿ ಡಾ.ಅಂಜಲಿ ನಿಂಬಾಳಕರ, ತೋಪಿನಕಟ್ಟಿ ಶ್ರೀ
ಮಹಾಲಕ್ಷ್ಮೀ ಗ್ರುಪ್ ಅಧ್ಯಕ್ಷ ವಿಠ್ಠಲ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ, ಬಿಇಒ
ಲಕ್ಷ್ಮಣರಾವ್ ಯಕ್ಕುಂಡಿ ಸೇರಿದಂತೆ ತಾಲೂಕಿನ ಶಿಕ್ಷಕರು ಹಾಗೂ ಶಿಕ್ಷಕ ಸಂಘಟನೆಯ
ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡಕ್ಕೆ ಅಗ್ರಸ್ಥಾನ, ಕನ್ನಡಿಗರಿಗೆ ಅಗ್ರಸ್ಥಾನ; ಇದು ನನ್ನ ಕಲ್ಪನೆಯ ಕರ್ನಾಟಕ – ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ