Kannada NewsLatest

ಬಾಳೇಕುಂದ್ರಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಅನುದಾನದಲ್ಲಿ ಬಾಳೇಕುಂದ್ರಿ ಕೆಎಚ್ ಗ್ರಾಮದ ಪಾಟೀಲ ಗಲ್ಲಿ, ಶಿವಾಜಿ ಗಲ್ಲಿ ಹಾಗೂ ಲಕ್ಷ್ಮೀ ಗಲ್ಲಿ  ರಸ್ತೆಗಳ ಡಾಂಬರೀಕರಣ ಕಾಮಗಾರಿಗಳಿಗೆ ಭೂಮಿಪೂಜೆ ಕೈಗೊಳ್ಳುವ ಮೂಲಕ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, “ಕ್ಷೇತ್ರದ ಬಹುತೇಕ ಒಳರಸ್ತೆಗಳ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಕೇವಲ ಸಂಚಾರ, ಸಾಗಾಟಕ್ಕಷ್ಟೇ ಅಲ್ಲದೆ, ತುರ್ತು ಸ್ಥಿತಿಯಲ್ಲಿ ನೆರವಿನ ವಾಹನಗಳು ಸಕಾಲಕ್ಕೆ ತಲುಪುವುದಕ್ಕೂ ಈ ರಸ್ತೆಗಳು ಸಹಾಯಕಾರಿಯಾಗುತ್ತಿದ್ದು ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸಾರ್ವಜನಿಕರೂ ಜವಾಬ್ದಾರಿ ವಹಿಸಬೇಕು” ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಸದಸ್ಯರಾದ ಜೈನುಲ್ ಕುಡಚಿ, ಪ್ರವೀಣ ಮುರಾರಿ, ಸೈಬಾಜ್ ಶೇಖ್, ಚಂದ್ರಕಾಂತ ಧರೆಣ್ಣವರ, ಮಾರುತಿ ಸುಳಗೇಕರ್, ವಿಠ್ಠಲ ಕುರುಬರ, ರಂಜಿತ್ ಪಾಟೀಲ ಪವನ ಜಾಧವ್, ರವಿ ಬಾಳುನವರ, ನಿಲೇಶ ಚಂದಗಡ್ಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Home add -Advt

ಮಕ್ಕಳು ಉತ್ತಮ ಪ್ರಜೆಗಳಾಗಲು ಒಳ್ಳೆಯ ಸಂಸ್ಕಾರ ನೀಡಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ

https://pragati.taskdun.com/give-children-good-culture-to-become-good-citizens-mla-lakshmi-hebbalakar/

BSY ಭಾಷಣಕ್ಕೆ ಮೋದಿ ಶ್ಲಾಘನೆ; ಹೆಮ್ಮೆ ವ್ಯಕ್ತಪಡಿಸಿದ BSB

https://pragati.taskdun.com/modi-praises-bsy-speech-a-proud-cm-basavraj-bommai/

*ಕಾಂಗ್ರೆಸ್ ನಿಂದ ಮತ್ತೊಂದು ಮಹತ್ವದ ಘೋಷಣೆ*

https://pragati.taskdun.com/d-k-shivakumarcongress10kg-free-raice-pressmeetsiddaramaiah/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button