ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಕ್ಷೇತ್ರದ ಬಹುತೇಕ ರಸ್ತೆಗಳು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಪ್ರಯತ್ನದಿಂದ ಸುಸಜ್ಜಿತಗೊಂಡಿದ್ದು ಸಂಪರ್ಕವಿಲ್ಲದ ಪ್ರದೇಶಗಳಿಗೂ ರಸ್ತೆ ಸಂಪರ್ಕ ಕಲ್ಪಿಸಿ ಜನತೆಗೆ ಅನುಕೂಲ ಮಾಡಿಕೊಡಲಾಗಿದೆ. ಮುಂಬರುವ ದಿನಗಳಲ್ಲಿ ಜನ ಆಶೀರ್ವದಿಸಿದರೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಇಡೀ ಬೆಳಗಾವಿ ಗ್ರಾಮೀಣ ಕ್ಷೇತ್ರ ನಂದನವನವಾಗಲಿದೆ” ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಅರಳಿಕಟ್ಟಿ ಗ್ರಾಮದಲ್ಲಿನ ಪಂಚಾಯತ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ಮಂಜೂರಾದ 40 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
“ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಬೆಂಬಲಿಸಿದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಯೋಜನೆಗಳೊಂದಿಗೆ ಜನಪರ ಸೇವೆಗೆ ಅಣಿಯಾಗಲಿದ್ದೇವೆ. ನುಡಿದಂತೆ ನಡೆದು ತೋರಿಸಿದ್ದು ಕ್ಷೇತ್ರದ ಮೂಲೆಮೂಲೆಗಳಲ್ಲಿ ನಡೆದಿರುವ, ಕಣ್ಣಿಗೆ ಗೋಚರಿಸುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತೋಂಟದಾರ್ಯ ಮಠದ ಶ್ರೀ ಶಿವಮೂರ್ತಿ ದೇವರು, ಸುರೇಶ ಇಟಗಿ, ಜಗದೀಶ ಯಳ್ಳೂರು, ನಾಗರಾಜ ಕರಿಲಿಂಗನ್ನವರ, ರಾಜು ಉಪ್ಪಾರ, ರಾಜು ಪಾಟೀಲ, ಪಾರವ್ವ ಹುದ್ದಾರ, ಅನ್ನಪೂರ್ಣ ಕರಿಲಿಂಗನ್ನವರ, ಶಿವಾನಂದ ಹಲಕರಣಿಮಠ, ಚಂಬಣ್ಣ ಉಳ್ಳಾಗಡ್ಡಿ, ಅಡಿವೆಪ್ಪ ಕರಿಲಿಂಗನ್ನವರ, ಸಿದ್ದಣ್ಣ ಸಿಂಗಾಡಿ, ಅಣ್ಣಪ್ಪ ಪಾಟೀಲ, ಗುರಪ್ಪ ಹೆಬ್ಬಾಳ್ಕರ್, ಮಾರುತಿ ಭಜಂತ್ರಿ, ಶಿವಾನಂದ ಸದಲಗಿ, ಶಂಕರ ಯಳ್ಳೂರ, ಸಿದ್ದು ಪಾಟೀಲ, ಅಭಿಷೇಕ್ ವಿಭೂತಿಮಠ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ