Kannada NewsLatest

ಸುಳಗಾ(ಯು) ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಸುಳಗಾ (ಯು) ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ ಒಂದು ಕೋಟಿ ರೂ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಮಂಜೂರು ಮಾಡಿಸಿದ್ದು. ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಇಂದು ಅವರು ಚಾಲನೆ ನೀಡಿದರು.

Home add -Advt

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಅಭೂತಪೂರ್ವವಾದ ಸರ್ವಾಂಗೀಣ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಈವರೆಗೂ ಕ್ಷೇತ್ರದ ಜನತೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿದ್ದು ಇನ್ನು ಮುಂದೆಯೂ ಮಾದರಿ ಕ್ಷೇತ್ರವಾಗಿಸುವಲ್ಲಿ ತಮ್ಮ ಬೆಂಬಲ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಕೋರಿದರು.

ಈ ಸಂದರ್ಭದಲ್ಲಿ ಮನೋಜ ಕಲಕಾಂಬ್ಕರ್, ಬಾಗಣ್ಣ ನರೋಟಿ, ಮಲ್ಲಪ್ಪ ಸುಳಗೇಕರ್, ಯಲ್ಲಪ್ಪ ಕಲಕಾಂಬ್ಕರ್, ನಿರ್ಮಲಾ ಕಲಕಾಂಬ್ಕರ್, ಮಾರುತಿ ಪಾಟೀಲ, ರಾಜಶ್ರೀ ಕೋಲಕಾರ, ರೇಖಾ ಪಾಟೀಲ, ದೀಪಾ ತೋರೆ, ವೈಷ್ಣವಿ ಕಾಟವೇಕರ್, ವರ್ಷ ಸಾವಗಾಂವ್ಕರ್, ಮಹಾದೇವ ಕಂಗ್ರಾಳಕರ್, ಗಣಪತ್ ಗಡ್ಕರಿ, ಪರುಶರಾಮ ಹೊಳೆನ್ನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಕಾರು ಕಳುವು ಮಾಡಿ ಮಾರುತ್ತಿದ್ದ ಆರೋಪಿಗಳ ಬಂಧನ; MSRTC ಮಾಜಿ ಗುಮಾಸ್ತ ಗುಪ್ತ ದಂಧೆಯ ಕಿಂಗ್ ಪಿನ್ !

https://pragati.taskdun.com/arrest-of-accused-who-stole-and-sold-cars-msrtc-ex-clerk-is-the-kingpin-of-the-undercover-racket/

*3 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ*

https://pragati.taskdun.com/election-commission-of-india-announceassembly-electionstripuranagalandmeghalaya/

*ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಗಳು ಪ್ರಕಟ*

https://pragati.taskdun.com/kuwjawardannounce/

Related Articles

Back to top button