Kannada NewsLatest

ಹಿಂಡಲಗಾದಲ್ಲಿ 38 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು ಸಂಚಾರ ಹಾಗೂ ಸಂಪರ್ಕದ ಪರಿಪೂರ್ಣ ವ್ಯವಸ್ಥೆಯ ಮೂಲಕ ಕ್ಷೇತ್ರವನ್ನು ಮಾದರಿಯಾಗಿಸಲಾಗುತ್ತಿದೆ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಹಿಂಡಲಗಾ ಗ್ರಾಮದ ಸಮರ್ಥ ಕಾಲೋನಿಯ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ 38 ಲಕ್ಷ ರೂ. ಅನುದಾ‌ನದಲ್ಲಿ ರಸ್ತೆ ನಿರ್ಮಾಣದ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ಕೈಗೊಂಡು ಅವರು ಮಾತನಾಡಿದರು.

“ಕ್ಷೇತ್ರದಲ್ಲಿ ಯಾವುದೇ ರಸ್ತೆಗಳ ಬಗ್ಗೆ ಸಾರ್ವಜನಿಕರು ಗಮನ ಸೆಳೆದಲ್ಲಿ ಆದ್ಯತೆ ಮೇರೆಗೆ ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವ ಕಾಂಗ್ರೆಸ್ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರಾದ ವಿಠ್ಠಲ ದೇಸಾಯಿ, ಪ್ರವೀಣ ಪಾಟೀಲ, ರಾಹುಲ್ ಉರಣಕರ್, ಅಶೋಕ ಕಾಂಬಳೆ, ಗಜಾನಂದ ಬಾಂಡೇಕರ್, ಸೀಮಾ ದೇವಕರ್, ಚೇತನಾ ಅಗಸ್ಗೆಕರ್, ನಿಖಿಲ್ ಸಿಂಗ್ ರಜಪೂತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Home add -Advt
https://pragati.taskdun.com/mla-laxmi-hebbalkar-inaugurates-smart-class-in-hindalaga-government-marathi-school/
https://pragati.taskdun.com/car-crashes-into-tree-two-killed-three-seriously-injured/

https://pragati.taskdun.com/early-morning-milk-shortage-in-the-capital-people-hotel-tea-stall-owners-in-problem/

Related Articles

Back to top button