ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ನಾಗೇರಹಾಳ ಗ್ರಾಮದಿಂದ ಯರಮಾಳ ಗ್ರಾಮದವರೆಗಿನ ರಸ್ತೆ ನಿರ್ಮಾಣದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸುಮಾರು 5 ಕೋಟಿ ರೂ, ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ದಿ ನಿರಂತರ ಪ್ರಕ್ರಿಯೆಯಾಗಿದೆ. ಮಳೆಯ ಕಾರಣದಿಂದ ಕೆಲವು ಕಾಮಗಾರಿಗಳು ವಿಳಂಬವಾಗಿವೆ. ಆದರೆ, 365 ದಿನವೂ ಒಂದಿಲ್ಲೊಂದು ಪ್ರದೇಶದಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುತ್ತಲೇ ಇರುತ್ತವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿಕ್ಕಿಲ್ಲ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿದೆ. ಇಂತಹ ಶಾಸಕರನ್ನು ಪಡೆದಿರುವುದು ನಮ್ಮ ಸುಧೈವವಾಗಿದೆ ಎಂದು ಚನ್ನರಾಜ ಹೇಳಿದರು.
ಈ ವೇಳೆ ಸೋಮಪ್ಪ ಧರೆಪ್ಪಗೋಳ, ರವಿ ಅಂಗಡಿ, ರುದ್ರಪ್ಪ ಚಿನ್ನಣ್ಣವರ, ಸಂತೋಷ ಕಂಬಿ, ನಿಂಗಪ್ಪ ದೊಡವಾಡಿ, ಸೋಮು ಅಕ್ಕನವರ, ಯಲ್ಲಪ್ಪ ದೊಡವಾಡಿ, ಬಸು ವಾಲಿಕಾರ, ಗಂಗಪ್ಪ ಗುಂಡುಗೋಳ, ಈರಪ್ಪ ಹುಲಮನಿ, ಕುಮಾರ ಹವಾಲ್ದಾರ, ಅಯ್ಯಪ್ಪ ಮಾವಿನಕಟ್ಟಿ, ಸಿದ್ರಾಯಿ ವಾಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ