Belagavi NewsBelgaum NewsKannada NewsKarnataka NewsLatest

*3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಉದ್ಘಾಟಿಸಿದ ಸಚಿವೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ರಂಗದೊಳ್ಳಿ, ಗುತ್ತಿ ಮತ್ತು ಕಾಳೆನಟ್ಟಿ ಗ್ರಾಮದಲ್ಲಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆಯನ್ನು ಮಂಗಳವಾರ ಗುತ್ತಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.


ಸುಮಾರು 3 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆಗಳು ನಿರ್ಮಾಣಗೊಂಡಿದ್ದು, ಗ್ರಾಮಸ್ಥರಲ್ಲಿ ಖುಷಿಯ ವಾತಾವರಣ ಮೂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಚುನಾವಣೆ ಪೂರ್ವ ನೀಡಿದ್ದ ಎಲ್ಲ ಭರವಸೆಗಳನ್ನೂ ಹಂತಹಂತವಾಗಿ ಈಡೇರಿಸಲಾಗುತ್ತಿದೆ. ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.


ಇಡೀ ಕ್ಷೇತ್ರ ಶಾಂತಿ, ಸಮೃದ್ಧಿಯಿಂದ ಇರಬೇಕೆನ್ನುವುದು ನನ್ನ ಧ್ಯೇಯ. ಅದರಂತೆ ನಿರಂತರ ಕೆಲಸ ಮಾಡುತ್ತಿದ್ದೇನೆ. ಹಿಂದೆಲ್ಲ ಶಾಸಕರಾಗಿದ್ದವರು ಏನು ಮಾಡಿದ್ದಾರೆ ಎನ್ನುವ ಚರ್ಚೆಗೆ ಹೋಗುವುದಿಲ್ಲ. ಆದರೆ ನಾನು ಯಾವುದೇ ರಾಜಕೀಯ ಮಾಡದೆ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಸಹ ನಿಮ್ಮೆಲ್ಲರ ಬೆಂಬಲವನ್ನು ಅಪೇಕ್ಷಿಸುತ್ತೇನೆ. ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಅಭಿವೃದ್ಧಿಯ ಇದೇ ವೇಗ ಮುಂದುವರಿಯಲಿದೆ ಎಂದರು.

Home add -Advt

ಕಾರ್ಯಕ್ರಮದಲ್ಲಿ ಅಶೋಕ ಮೂಖನವರ, ಮಾರುತಿ ದಾಸನಟ್ಟಿ, ಕೆಂಚಪ್ಪ ಗಡ್ಕರಿ, ಗುಡದಪ್ಪ ಇರಭಾಂವಿ, ಸಿದ್ದಪ್ಪ ದಾಸನಟ್ಟಿ, ಸಿದ್ದಪ್ಪ ಹರಿಜನ, ನಿಂಗಪ್ಪ ತಲ್ಲೂರಿ, ಎಲ್.ನಾಯ್ಕಿ ಕುಪ್ಪಾನಿ, ಮಹಾದೇವ್ ಕುಪ್ಪಾನಿ, ಬಸು ಕುಂದರಗಿ, ಮಾರುತಿ ಗಡ್ಕರಿ, ಗಂಗವ್ವ ದರ್ಸನಟ್ಟಿ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button