
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಆಡಿಯೋ-ವಿಡಿಯೋ ಬಾಂಬ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್, ಚುನಾವಣೆ ಸಂದರ್ಭದಲ್ಲಿನ ಸಿಸಿಟಿವಿ ದ್ಯಶ್ಯಾವಳಿಗಳನ್ನು ದುರ್ಬಳಕೆ ಮಾಡಿಕೊಂಡು ನನ್ನ ಹಾಗೂ ಸುಮಲತಾ ಬಗ್ಗೆ ಸ್ಟೋರಿ ಮಾಡಲು ಹೊರಟಿದ್ದರು ಆರೋಪಿಸಿದ್ದಾರೆ.
ಮಂಡ್ಯ ಚುನಾವಣೆ ಸಂದರ್ಭದಲ್ಲಿ ನಾನು, ಸುಮಲತಾ ಹಾಗೂ ಹಲವರು ಮಂಡ್ಯದಲ್ಲಿ ಹೋಟೆಲ್ ನಲ್ಲಿ ಇರುತ್ತಿದ್ದೆವು. ಹೋಟೆಲ್ ನಲ್ಲಿ ನಾನು ಸುಮಲತಾ ಓಡಾಡುತ್ತಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಅದಕ್ಕೆ ಅಶ್ಲೀಲ ಚಿತ್ರ ಸೇರಿಸಿ ವಿಡಿಯೋ ಮಾಡಿ ದುರ್ಬಳಕೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದರು ಎಂದು ಹೇಳಿದ್ದಾರೆ.
ಈ ಬಗ್ಗೆ ಕುಮಾರಸ್ವಾಮಿ ಅವರ ಚಾನಲ್ ನಲ್ಲಿದ್ದ ಅಂಬರೀಶ್ ಅಭಿಮಾನಿಯೇ ನನಗೆ ಮಾಹಿತಿ ನೀಡಿದ್ದ. ಬಳಿಕ ಈ ಸಂದರ್ಭದಲ್ಲಿ ಇದು ಸರಿಯಲ್ಲ ಎಂದು ಪ್ಲಾನ್ ಕೈಬಿಟ್ಟಿದ್ದಾಗಿಯೂ ತಿಳಿಸಿದ್ದ. ತಂತ್ರಜ್ನಾನ ಮುಂದುವರೆದಿರುವ ಈ ದಿನಗಳಲ್ಲಿ ಯಾರೂ ಅಂತಹ ವಿಡಿಯೋ ಫೋಟೋಗಳನ್ನು ನಬಲ್ಲ. ಆದರೆ ಕುಮಾರಸ್ವಾಮಿಯವರ ಕೆಟ್ಟ ಮನಸ್ಥಿತಿ ಏನಿರಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಅಂಬರೀಶ್ ಬಗ್ಗೆ ಮಾತನಾಡಿದ್ರೆ ಹುಷಾರ್! ಹೆಚ್.ಡಿ.ಕೆಗೆ ರಾಕ್ ಲೈನ್ ವೆಂಕಟೇಶ್ ವಾರ್ನಿಂಗ್