LatestUncategorized

*ರೋಹಿಣಿ ಸಿಂಧೂರಿ ಖಾಸಗಿ ಫೋಟೋ ವೈರಲ್ ಮಾಡಿದ ಡಿ.ರೂಪಾ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮಹಿಳಾ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ನಡುವೆ ಸಮರ ಆರಂಭವಾಗಿದೆ. ರೋಹಿಣಿ ಸಿಂಧೂರಿ ಅವರ ಕೆಲ ಖಾಸಗಿ ಫೋಟೋಗಳನ್ನು ವೈರಲ್ ಮಾಡಿರುವ ಡಿ.ರೂಪಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ರೋಹಿಣಿ ಸಿಂಧೂರಿ ತಮ್ಮ ಕೆಲ ಖಾಸಗಿ ಫೋಟೋಗಳನ್ನು ಪುರುಷ ಐಎ ಎಸ್ ಅಧಿಕಾರಿಗಳಿಗೆ ಪದೇ ಪದೇ ಕಳುಹಿಸುತ್ತಿದ್ದಾರೆ. ಮಹಿಳಾ ಐಎ ಎಸ್ ಅಧಿಕಾರಿ ಪುರುಷ ಅಧಿಕಾರಿಗಳಿಗೆ ಇಂತಹ ಫೋಟೋ ಕೌಹಿಸುವುದರ ಅರ್ಥವೇನು? ಎಂದು ಕಿಡಿಕಾರಿರುವ ಡಿ.ರೂಪಾ, ರೋಹಿಣಿ ಅವರ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶಾಸಕರ ವಿರುದ್ಧ ರೋಹಿಣಿ ಸಿಂಧೂರಿ ಆರೋಪಗಳನ್ನು ಮಾಡುತ್ತಾರೆ. ಸಿಂಧೂರಿಯವರ ನಾವೆಲ್ಲರೂ ಬೆಂಬಲಿಸಿದ್ದೆವು. ಈಗ ಅವರು ಅದೇ ಶಾಸಕರ ಜೊತೆ ರಾಜಿ ಸಂಧಾನಕ್ಕೆ ಹೋಗಿದ್ದಾರೆ. ಆರೋಪ ಮಾಡಿದ ಮೇಲೆ ಅವರೊಂದಿಗೆ ಸಂಧಾನ ಮಾಡಿಕೊಳ್ಳುವ ಅಗತ್ಯವೇನಿತ್ತು? ರೋಹಿಣಿ ಭ್ರಷ್ಟಾಚಾರ ಮಾಡಿದ್ದಾರಾ? ಕರ್ತವ್ಯಲೋಪವೆಸಗಿದ್ದಾರಾ? ತಪ್ಪು ಮಾಡಿಲ್ಲ ಎಂದ ಮೇಲೆ ರಾಜಿ ಸಂಧಾನ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಕೆಲ ದಿನಗಳಿಂದ ಮೂವರು ಪುರಷ ಐಎ ಎಸ್ ಅಧಿಕಾರಿಗಳಿಗೆ ರೋಹಿಣಿ ತಮ್ಮ ಖಾಸಗಿ ಫೋಟೋಗಳನ್ನು ಕಳುಹಿಸುತ್ತಿದ್ದಾರೆ. ಅದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಈ ಫೋಟೋಗಳು ನಾರ್ಮಲ್ ಅನ್ನಿಸಬಹುದು. ಆದರೆ ಐಎ ಎಸ್ ಸರ್ವಿಸ್ ಕಂಡಕ್ಟ್ ರೂಲ್ಸ್ ಪ್ರಕಾರ ಅಪರಾಧ. ಒನ್ ಟು ಒನ್ ಹಲವು ಫೋಟೋ ಕಳುಹಿಸಿದ್ದಾರೆ. ಇದರರ್ಥ ಏನು? ಓರ್ವ ಮಹಿಳೆ ಪುರುಷ ಅಧಿಕಾರಿಗೆ ಈ ರೀತಿ ಫೋಟೋ ಕಳುಹಿಸುವುದರ ಉದ್ದೇಶವೇನು? ರೋಹಿಣಿ ನಡವಳಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಈಗಾಗಲೇ ನಾನು ರೋಹಿಣಿ ವಿರುದ್ಧ ಮಾಡಿರುವ 19 ಆರೋಪಗಳ ಬಗ್ಗೆಯೂ ದಾಖಲೆಗಳಿವೆ. ನೋಡೋಣ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ? ತನಿಖೆಯನ್ನು ನಡೆಸುತ್ತಾರಾ ಎಂಬುದನ್ನು ಕಾದು ನೋಡೋಣ ಎಂದು ಗುಡುಗಿದ್ದಾರೆ.

Home add -Advt

ರೋಹಿಣಿ IAS V/s ರೂಪಾ IPS; ಜಾಲತಾಣಕ್ಕೂ ತಲುಪಿದ ಜಟಾಪಟಿ

https://pragati.taskdun.com/a-star-studded-fight-between-rohini-sindhuri-and-roopa-moudgil/

ನಟ ನಂದಮೂರಿ ತಾರಕರತ್ನ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button