ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಮಾಜಿ ಸಚಿವ, ಹಿರಿಯ ಕಾಂಗ್ರೆಸ್ಸಿಗ ರೋಶನ್ ಬೇಗ್ ಪಕ್ಷದಿಂದ ಅಮಾನತಾಗಿದ್ದಾರೆ.
ಪಕ್ಷದ ನಾಯಕರ ವಿರುದ್ದ ನಿರಂತರ ವಾಗ್ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಅವರನ್ನು ಕೆಪಿಸಿಸಿ ಅಮಾನತುಗೊಳಿಸಿದೆ.
ವೇಣುಗೋಪಾಲ, ಸಿದ್ದರಾಮಯ್ಯ, ದಿನೇಶ ಗುಂಡೂರಾವ್ ವಿರುದ್ದ ಬಹಿರಂಗವಾಗಿ ಟೀಕೆಗಳನ್ನು ಮಾಡಿದ್ದರು. ಕೆಪಿಸಿಸಿ ಕೊಟ್ಟ ಶೊಕಾಸ್ ನೋಟೀಸನ್ನು ಓದುವುದೂ ಇಲ್ಲ ಎಂದಿದ್ದರು.
ಅಗತ್ಯಬಿದ್ದರೆ ಎನ್ ಡಿಎ ಬೆಂಬಲಿಸಲೂ ಮುಸ್ಲಿಮರು ಹಿಂಜರಿಯುವುದಿಲ್ಲ. ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅಹಂಕಾರ ಕಾರಣ ಎಂದೂ ಬೇಗ್ ಹೇಳಿದ್ದರು.
ವೇಣುಗೋಪಾಲ ಬಫೂನ್, ದಿನೇಶ ಪ್ಲಾಪ್ ಅಧ್ಯಕ್ಷ ಎಂದಿದ್ದರು.
ಹೈಕಮಾಂಡ್ ಅನುಮತಿ ಪಡೆದು ಅವರನ್ನು ಅಮಾನತುಗೊಳಿಸಲಾಗಿದೆ.