
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ರೋಟರಿ ಕ್ಲಬ್ ಆಫ್ ಬೆಳಗಾಂ ಸೌಥ್ ಪ್ರಕೃತಿ ವಿಕೋಪ ನಿರ್ವಹಣೆ ತರಬೇತಿ ಪಡೆಯುತ್ತಿರುವ ಹೋಮ್ ಗಾರ್ಡ್ಸ್ ಗಳಿಗೆ ಸೆನಿಟೈಸರ್, ಮಾಸ್ಕ್, ಪೆನ್, ನೋಟ್ ಬುಕ್ ಮುಂತಾದ ಪರಿಕರಗಳನ್ನು ವಿತರಿಸಿತು.
ಕ್ಲಬ್ ಅಧ್ಯಕ್ಷ ಜಯಸಿಂಹ, ಸದಸ್ಯರಾದ ಸತೀಶ್ ಕುಲಕರ್ಣಿ, ಗೋವಿಂದ ಮಿಸಾಳೆ, ಕೀರ್ತಿ ಸುರಂಜನ್ ಮೊದಲಾದವರು ಸಾಮಗ್ರಿಗಳನ್ನು ವಿತರಿಸಿದರು.
ರೋಟರಿ ಕ್ಲಬ್ ಆಫ್ ಬೆಳಗಾಂ ಸೌಥ್ ಕೊರೋನಾ ಆರಂಭವಾದಾಗಿನಿಂದ ಪೊಲೀಸರು ಸೇರಿದಂತೆ ಕೊರೋನಾ ವಾರಿಯರ್ಸ್ ಗಳಿಗೆ ವಿವಿಧ ಸಾಮಗ್ರಿಗಳನ್ನು ವಿತರಿಸುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ