
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರೋಟರಿ ಕ್ಲಬ್ ಆಫ್ ಬೆಳಗಾವಿ ದಕ್ಷಿಣ ಬೈಲಹೊಂಗಲದ ಅನುಗ್ರಹ ಹೆಲ್ತ್ ಕೇರ್ ಸಹಯೋಗದಲ್ಲಿ ಇಂದು ಬೆಳಗಾವಿಯ ಭರತೇಶ ಪಿಯು ಕಾಲೇಜಿನ ವಿದ್ಯಾರ್ಥಿನಿಯರಿಗೆ ಋತುಚಕ್ರದ ನೈರ್ಮಲ್ಯ ನಿರ್ವಹಣೆ (MHM) ಕುರಿತು ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
ಅನುಗ್ರಹ ಹೆಲ್ತ್ ಕೇರ್‌ನ ಸಂಸ್ಥಾಪಕಿ ದಾನೇಶ್ವರಿ ಬಿಲ್ಲೋರ್ ಮಾತನಾಡಿ, ಋತುಸ್ರಾವ ಮತ್ತು ಋತುಚಕ್ರದ ಆಚರಣೆಗಳು ಇನ್ನೂ ಅನೇಕ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಿರ್ಬಂಧಗಳನ್ನು ಎದುರಿಸುತ್ತಿವೆ. ಇದು ಮುಟ್ಟಿನ ನೈರ್ಮಲ್ಯ ನಿರ್ವಹಣೆಯ ಹಾದಿಯಲ್ಲಿ ದೊಡ್ಡ ತಡೆಗೋಡೆಯಾಗಿದೆ. ಮುಟ್ಟಿನ ಸಮಯದಲ್ಲಿ ವೈಯಕ್ತಿಕ ನೈರ್ಮಲ್ಯದ ಅಜ್ಞಾನದಿಂದ ಉಂಟಾಗುವ ಸಂತಾನೋತ್ಪತ್ತಿ ಪ್ರದೇಶದ ಸೋಂಕಿನ ಬಗ್ಗೆ ಹುಡುಗಿಯರು ಮತ್ತು ಮಹಿಳೆಯರಿಗೆ ಬಹಳ ಕಡಿಮೆ ಅಥವಾ ಯಾವುದೇ ಜ್ಞಾನವಿಲ್ಲ ಎಂದು ಅವರು ಹೇಳಿದರು.
ಸ್ಯಾನಿಟರಿ ಪ್ಯಾಡ್‌ಗಳ ಸರಿಯಾದ ಬಳಕೆ ಮತ್ತು ವಿಲೇವಾರಿ ಕುರಿತು ಅವರು ಹುಡುಗಿಯರಿಗೆ ಪ್ರಾತ್ಯಕ್ಷಿಕೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೀರ್ತಿ ಸುರಂಜನ್ ಅವರು ಹೆಣ್ಣುಮಕ್ಕಳಿಗೆ ಜೀವನದಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವವನ್ನು ತಿಳಿಸಿದರು.
ಎಲ್ಲಾ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಅಧ್ಯಕ್ಷ ಅಶೋಕ್ ನಾಯ್ಕ್ ಮಾತನಾಡಿ, ಕ್ಲಬ್ ಬೆಳಗಾವಿಯ ಎಲ್ಲಾ ಭಾಗಗಳಿಂದ 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುತ್ತಿದೆ ಮತ್ತು ತಜ್ಞರಿಂದ MHM ಕುರಿತು ಜಾಗೃತಿ ಮೂಡಿಸುತ್ತಿದೆ. ಶಾಲೆಯಲ್ಲಿ ಸ್ಯಾನಿಟರಿ ವೆಂಡಿಂಗ್ ಮತ್ತು ಇನ್ಸಿನರೇಟರ್ ಅಳವಡಿಸಲು ಕ್ಲಬ್ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಸುನೀತಾ ದೇಶಪಾಂಡೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಂತೋಷ ಹತ್ತರಕಿ, ಡಾ.ಜಯಸಿಂಹ ಉಪಸ್ಥಿತರಿದ್ದರು. 120ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಜರಿದ್ದರು.
ಮಕ್ಕಳನ್ನು ಗೀಚಲು ಬಿಡಿ ಅವರೇ ಪ್ರಸಿದ್ಧ ಚಿತ್ರಕಲಾವಿದರಾಗಬಹುದು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ