
ಪ್ರಗತಿವಾಹಿನಿ ಸುದ್ದಿ: ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸುಪಾರಿ ಕಿಲ್ಲರ್ ಗಳನ್ನು ಬಂಧಿಸಲಾಗಿದೆ.
ಬಿಕ್ಲು ಶಿವ ಕೊಲೆಗೆ ಸುಪಾರಿ ಪಡೆದಿದ್ದ ನಟೋರಿಯಸ್ ಗಳ ಪೈಕಿ ಕೋಲಾರ ಜಿಲ್ಲೆಯ ನಾಲ್ಕು ಸುಪಾರಿ ಕಿಲ್ಲರ್ ಗಳನ್ನು ಬೆಂಗಳೂರಿನ ಭಾರತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಿನ್ನಹಳ್ಳಿ ಗ್ರಾಮದ ಅಭಿಷೇಕ್, ಪೆಮ್ಮದೊಡ್ಡಿ ಗ್ರಾಮದ ನರಸಿಂಹ, ಚಿಕ್ಕದಾನವಹಳ್ಳಿ ಗ್ರಾಮದ ಮುರುಗೇಶ್ ಹಾಗೂ ಬಂಗಾರಪೇಟೆ ತಾಲೂಕಿನ ಮಾರಾಂಡಹಳ್ಳಿ ಗ್ರಾಮದ ಸುದರ್ಶನ್ ಬಂಧಿತ ಆರೋಪಿಗಳು.
ಬಂಧಿತರಲ್ಲಿ ಮುರುಗೇಶ್ ತಮಿಳುನಾಡಿನ ಬೇರಕಿ ಕಾರ್ತಿಕ್ ಹತ್ಯೆ ಕೇಸ್ ನಲ್ಲಿ ಭಾಗಿಯಾದವನು. ಉಳಿದ ಮೂವರು ಆರೋಪಿಗಳು ಕೂಲಿ, ವ್ಯವಸಾಯ ಮಾಡಿಕೊಂದಿದ್ದವರು ಎಂದು ತಿಳಿದುಬಂದಿದೆ.