ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೊಲೀಸರ ಕಣ್ತಪ್ಪಿಸಿ ನಾಪತ್ತೆಯಾಗಿದ್ದ ರೌಡಿಶೀಟರ್ ಸೈಲೆಂಟ್ ಸುನೀಲ್ ಇದೀಗ ಬಿಜೆಪಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಪ್ರತ್ಯಕ್ಷ ವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ನಡೆದ ಬಿಜೆಪಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರದಲ್ಲಿ ರೌಡಿ ಶೀಟರ್ ಸೈಲೆಂಟ್ ಸುನೀಲ್ ಕಾಣಿಸಿಕೊಂಡಿದ್ದಲ್ಲದೇ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಅವರ ಪಕ್ಕದಲ್ಲಿಯೇ ಕುಳಿತುಕೊಳ್ಳುವ ಮೂಲಕ ಬಿಜೆಪಿ ಸೇರ್ಪಡೆಗೆ ಚಿಂತನೆ ನಡೆಸಿದ್ದಾನೆ ಎನ್ನಲಾಗಿದೆ. ನಾಪತ್ತೆಯಾಗಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲ್ ಗಾಗಿ ಹುಡುಕಾಡುತ್ತಿರುವುದಾಗಿ ಪೊಲೀಸರು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರು. ಆದರೆ ಈಗ ಬಿಜೆಪಿ ಕಾರ್ಯಕ್ರಮದ ವೇದಿಕೆಯಲ್ಲಿ ಸಂಸದರ ಪಕ್ಕದಲಿಯೇ ಕಾಣಿಸಿಕೊಂಡರು ಪೊಲೀಸರು ಸುಮ್ಮನಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ನಡುವೆ ಸಚಿವ ಅಶ್ವಥ ನಾರಾಯನ ರೌಡಿ ಶೀಟರ್ ಪರ ಸಮರ್ಥನೆ ಮಾಡಿಕೊಂಡಿರುವುದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ರೌಡಿ ಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಸೇರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಒಳ್ಳೆಯ ರೀತಿ ಬದುಕಿ ಬಾಳಲು ಎಲ್ಲರಿಗೂ ಅವಕಾಶವಿದೆ. ಕಾನೂನಿನಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರು ತಪ್ಪಿತಸ್ಥರೆ. ಆದರೆ ಅವರ ಮೇಲೆ ಚಾರ್ಜ್ ಶೀಟ್ ಆಗಿಲ್ಲ, ಯಾವ ಶಿಕ್ಷೆ ಸಹ ಆಗಿಲ್ಲ. ಹೀಗಿರುವಾಗ ಯಾವುದೇ ವ್ಯಕ್ತಿಗೆ ಯಾವುದೇ ರೀತಿ ನಾಮಕರಣ ಮಾಡುವುದು ತಪ್ಪು ಎಂದಿದ್ದಾರೆ.
ಅಲ್ಲದೇ ಯಾವುದೂ ಪ್ರಕರಣಗಳಿಲ್ಲದ ವ್ಯಕ್ತಿಗೆ ಬದುಕಲು ಅವಕಾಶ ಕೊಡಬೇಕು. ಅವಕಾಶ ಕೊಡದೇ ವಿನಾಕಾರಣ ನಿಂದಿಸುವ ಕೆಲಸ ಮಾಡಬಾರದು. ಆತನಿಗೆ ಶಿಕ್ಷೆ ಆಗಿದ್ದರೆ ಚುನಾವಣೆಗೆ ನಿಲ್ಲಲು ಅವಕಾಶ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ತಿದ್ದುಕೊಂಡು ನಡೆಯುತ್ತೇನೆ ಎಂದರೆ ಒಳ್ಳೆರೀತಿಯಲ್ಲಿ ಬದುಕಲು ಅವಕಾಶ ಕೊಡೋಣ ಎಂದು ಹೇಳಿದ್ದಾರೆ.
ಸಿದ್ರಾಮುಲ್ಲಾಗೆ ಖುಷಿಯಾಗುವುದನ್ನೇ ಹೇಳಿದ್ದೇನೆ ಎಂದ ಸಿ.ಟಿ.ರವಿ
https://pragati.taskdun.com/c-t-ravireactionsidramullakhanstatment/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ