Karnataka NewsLatest
1.40 ಕೋಟಿ ರೂ. ವೆಚ್ಚದಲ್ಲಿ ಬೆಳಗುಂದಿ- ಬೆಳಗಾವಿ ರಸ್ತೆ : ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದಿಂದ ಬೆಳಗಾವಿ ವರೆಗೆ ರಸ್ತೆಯನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 1.40 ಕೋಟಿ ರೂ,ಗಳನ್ನು ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕಲ್ಲೆಹೋಳ ಕಾರ್ನರ್ ವಡ್ರಾಂಗಿ ಪ್ರದೇಶದಲ್ಲಿ ಸೋಮವಾರ ಭೂಮಿ ಪೂಜೆಯನ್ನು ಕೈಗೊಂಡು ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕ್ಷೇತ್ರದಲ್ಲಿ ಬಹುಕೋಟಿ ವೆಚ್ಚದಲ್ಲಿ ಈವರೆಗೆ ಅನೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿ ರೂಪುಗೊಳಿಸಲಾಗುತ್ತಿದೆ. ಇನ್ನೂ ಹೆಚ್ಚು ಅಭಿವೃದ್ಧಿಯ ಗುರಿ ಹೊಂದಿದ್ದು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮನೋಹರ್ ಬೆಳಗಾಂವ್ಕರ್, ಮಹೇಶ ಪಾಟೀಲ, ನಾಮದೇವ ಮೋರೆ, ಮಲ್ಲಪ್ಪ ಪಾಟೀಲ, ಶಿವಾಜಿ ಪಾಟೀಲ, ಬಾಗಣ್ಣ ನರೋಟಿ, ಪರಶುರಾಮ ಬಾಸ್ಕಳ, ಮನೋಹರ ಪಾಟೀಲ, ರೆಹಮಾನ್ ತಹಶಿಲ್ದಾರ, ಶಿವಾಜಿ ಬೆಟಗೇರಿಕರ್, ಶಿವಾಜಿ ಬೋಕಡೆ, ಮಹಾದೇವ ಪಾಟೀಲ, ಪ್ರಭಾಕರ್ ಚಿರಮುರ್ಕರ್, ನಿಂಗೂಲಿ ಚೌಹಾನ್, ವನಿತಾ ಪಾಟೀಲ, ಮಾರುತಿ ಪಾಟೀಲ, ಮದನ ಬಿಜಗಿರಕರ್, ಪರುಶರಾಮ ಯಳ್ಳೂರಕರ್, ವಿಲಾಸ ಪಾಟೀಲ, ದಾಕಳು ಪಾಟೀಲ, ಯಲ್ಲಪ್ಪ ಕಲಕಾಂಬ್ಕರ್, ಕಲ್ಲಪ್ಪ ಕನ್ನೂರಕರ್, ರವಿ ಜಾಧವ್, ರಂಜನಾ ಗಾವಡೆ, ಆಪ್ತ ಸಹಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ