Latest

BJP ವಾಷಿಂಗ್ ಮಷಿನ್ ಇದ್ದ ಹಾಗೆ; ಪಕ್ಷಕ್ಕೆ ಸೇರಿದರೆ ಪಾಪಿಗಳು ಪಾವನರಾಗ್ತಾರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ನಾಯಕರು ರೌಡಿಶೀಟರ್ ಗಳ ಕಾರ್ಯಕ್ರಮದಲ್ಲಿ ಭಾಗಿ ಹಾಗೂ ಬಿಜೆಪಿ ಸೇರ್ಪಡೆ ವಿಚಾರವಾಗಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಹಿಗ್ಗಾ ಮುಗ್ಗಾ ವಾಕ್ಪ್ರಹಾರ ನಡೆಸಿದ್ದಾರೆ. ಬಿಜೆಪಿ ವಾಷಿಂಗ್ ಮಷಿನ್ ಇದ್ದಂತೆ. ಪಕ್ಷಕ್ಕೆ ಸೇರಿದರೆ ಪಾಪ, ಪಾಪಿಗಳು ಕ್ಲೀನ್ ಆಗ್ತಾರೆ ಎಂದು ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಸೇರಿದರೆ ಪಾಪಿಗಳೆಲ್ಲ ಪಾವನರಾಗ್ತಾರೆ. ಬಿಜೆಪಿ ಶಾಲು, ಕೇಸರಿ ಶಾಲು ಹಾಕಿದರೆ ಎಲ್ಲಾ ಪಾಪ ಕ್ಲೀನ್ ಆಗುತ್ತದೆ ಎಂದು ಹೆಳಿದ್ದಾರೆ.

ಖಾಲಿ ಕುರ್ಚಿಗಳ ಸ್ಪಂದನ ಆಗುತ್ತಿರುವುದಕ್ಕೆ ಬಿಜೆಪಿಯವರು ಮಸಲ್ ಪವರ್ ಬಳಸುತ್ತಿದ್ದಾರೆ. ಬಿಜೆಪಿ ಮನಿ ಹಾಗೂ ಮಸಲ್ ಪವರ್ ಬಳಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ರೌಡಿಶೀಟರ್ ಸೈಲೆಂಟ್ ಸುನೀಲ್ ಯಾಕೆ ಸಿಸಿಬಿ ಪೊಲೀಸರಿಗೆ ಸಿಗ್ತಿಲ್ಲ? ಸುನೀಲ್ ಎಲ್ಲಿ ಎಂದು ಸಂಸದ ತೇಜಸ್ವಿ ಸೂರ್ಯನನ್ನು ಕೇಳಿದರೆ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೋಸ್ಟ್ ವಾಂಟೆಡ್ ಇರುವವರು ಸಿಸಿಬಿ ಕೈಗೆ ಸಿಗುತ್ತಿಲ್ಲ ಎಂದರೆ ಏನರ್ಥ? ಗೃಹ ಸಚಿವರಿಗೂ ಇವರಿಗೂ ಹೊಂದಾಣಿಕೆ ಇದೆಯೇ? ಪುಡಿರೌಡಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

Home add -Advt

ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ: ಮಾಜಿ ಸಿಎಂ ಪಾತ್ರದಲ್ಲಿ ಮಿಂಚಲಿರುವ ನಟ ಯಾರು?

https://pragati.taskdun.com/siddaramaiahfilmshivaraj-tangadagivijay-setupati/

Related Articles

Back to top button