*ಎರಡನೆ ದಿನದ ಅಧಿವೇಶನಕ್ಕೆ ಸಾಲು ಸಾಲು ಪ್ರತಿಭಟನೆಗಳ ಬಿಸಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಎರಡನೇ ದಿನದ ಚಳಿಗಾಲದ ಅಧಿವೇಶನ ಇಂದು ನಡೆಯಲಿದ್ದು, ಒಂದೇ ದಿನ ಒಂಭತ್ತು ಪ್ರತಿಭಟನೆಗಳ ಬಿಸಿ ಸರ್ಕಾರಕ್ಕೆ ತಟ್ಟಲಿದೆ.
ಎತಡನೆಯ ದಿನವಾದ ಇಂದು ಸದನದ ಹೊರಗೆ ಸಾಲು ಸಾಲು ಪ್ರತಿಭಟನೆಗಳು ನಡೆಯಲಿದೆ. ಬಿಜೆಪಿ ಪಕ್ಷದಿಂದ ರೈತರ ಪರ ಹೋರಾಟಕ್ಕೆ ಸಿದ್ದತೆ ಆಗಿದೆ. ಸ್ವಾಮಿನಾಥನ್ ವರದಿ ಜಾರಿ, ಕೃಷಿ ಕಾಯ್ದೆ ವಾಪಾಸ್ ಪಡೆಯುವಂತೆ ರೈತ ಸಂಘದಿಂದ ಪ್ರತಿಭಟನೆ ನಡೆಯಲಿದೆ. ದ್ವಿಭಾಷಾ ನೀತಿ ಕೈ ಬಿಟ್ಟು ತ್ರಿಭಾಷಾ ನೀತಿ ಮುಂದುವರೆಸುವಂತೆ ಆಗ್ರಹಿಸಿ ಪ್ರೌಢ ಶಾಲಾ ಸಂಸ್ಕೃತ ಅಧ್ಯಾಪಕರ ಸಂಘದಿಂದ ಹೋರಾಟ ನಡೆಯಲಿದೆ.
ಎಲ್ಲ ತಾಲೂಕುಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರುವಂತೆ ಒತ್ತಾಯಿಸಿ ನೇಗಿಲಯೋಗಿ ರೈತ ಸಂಘದಿಂದ ಪ್ರತಿಭಟಿಸಿದರೆ. ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ದಿಂದ ಹೋರಾಟ, ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದಿಂದ ಪ್ರತಿಭಟನೆ, ಎಸ್ಸಿ ಗೆ ಸೇರ್ಪಡಿಸುವಂತೆ ಒತ್ತಾಯಿಸಿ ಮಡಿವಾಳ ಸಮಾಜದಿಂದ ಹೋರಾಟ ನಡೆಯಲಿದೆ
ಎಂಟು ಸಂಘಟನೆಗಳಿಗೆ ಸುವರ್ಣ ಗಾರ್ಡನ್ ನಲ್ಲಿ ಹೋರಾಟಕ್ಕೆ ಸ್ಥಳ ನಿಗದಿ ಪಡಿಸಲಾಗಿದೆ. ಮಾಲಿನಿ ಸಿಟಿಯಲ್ಲಿ ಬಿಜೆಪಿ ಪಕ್ಷದ ಹೋರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.



