ಹದಿನಾರೇ ದಿನದಲ್ಲಿ ಮತ್ತೊಂದು ದಾಖಲೆ ಬರೆದ RRR

ಪ್ರಗತಿ ವಾಹಿನಿ ಸುದ್ದಿ ಮುಂಬೈ –

ಎಸ್. ಎಸ್. ರಾಜಮೌಳಿ ನಿರ್ದೇಶನದ, ಜ್ಯೂ. ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜಾ ಅಭಿನಯದ ಆರ್‌ಆರ್‌ಆರ್ ಚಿತ್ರ ಬಿಡುಗಡೆಯಾಗಿ ೧೬ ದಿನದಲ್ಲಿ ಬರೋಬ್ಬರಿ ೧ ಸಾವಿರ ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದಿದೆ.

ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ಕೇವಲ ಕೇವಲ ೨ ಚಿತ್ರಗಳು ಮಾತ್ರ ಗಳಿಕೆಯಲ್ಲಿ ೧ ಸಾವಿರ ಕೋಟಿ ಗಡಿ ದಾಟಿದ್ದವು. ಪ್ರಸ್ತುತ ಆರ್‌ಆರ್‌ಆರ್ ಈ ಸಾಲಿಗೆ ಮೂರನೇಯದಾಗಿ ಸೇರ್ಪಡೆಯಾಗಿದೆ.

ದಂಗಲ್ ಚಲನಚಿತ್ರ ಈವರೆಗಿನ ಗಳಿಕೆ ೨ ಸಾವಿರ ಕೋಟಿಯಾಗಿದ್ದು ಭಾರತೀಯ ಚಿತ್ರಗಳ ಪೈಕಿ ಬಾಕ್ಸ್ ಆಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಮೊದಲನೇ ಸ್ಥಾನದಲ್ಲಿ ಆ ಬಳಿಕ ಬಾಹುಬಲಿ ೨ ಕೂಡ ಗಳಿಕೆಯಲ್ಲಿ ೧ ಸಾವಿರ ಕೋಟಿ ರೂ. ಗಡಿ ದಾಟಿದ್ದು, ಪ್ರಸ್ತುತ ಆರ್‌ಆರ್‌ಆರ್ ಕೂಡ ಈ ಸಾಲಿಗೆ ಸೇರ್ಪಡೆಯಾಗಿದೆ.

ಮೀನುಗಾರರ ಬಿಡುಗಡೆಗೆ 12 ಕೋಟಿ ರೂ. ಕೇಳಿದ ಶ್ರೀಲಂಕಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button