ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 20 ಲಕ್ಷ ರೂ. ವೆಚ್ಚದಲ್ಲಿ ಬೆಕ್ಕಿನಕೇರಿ ರಸ್ತೆಗಳ ಅಭಿವೃದ್ಧಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮಂಗಳವಾರ ಪೂಜೆ ನೆರವೇರಿಸಿದರು.
ಬೆಕ್ಕಿನಕೇರಿ ಗ್ರಾಮದ ನಾಗನಾಥ್ ಗಲ್ಲಿ, ಲಕ್ಷ್ಮೀ ಗಲ್ಲಿ ಹಾಗೂ ಗವಳಿ ಗಲ್ಲಿ ಈ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 20 ಲಕ್ಷ ರೂ. ಮಂಜೂರಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಮೃಣಾಲ ಹೆಬ್ಬಾಳಕರ್ ಸೇರಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು..
ಗ್ರಾಮದ ಶ್ರೀ ಲಕ್ಷ್ಮೀ ಮಂದಿರದ ಅಭಿವೃದ್ಧಿಗಾಗಿ 5 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಲಾಗಿದ್ದು, ಜೊತೆಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ,ಗಳನ್ನು ದೇವಸ್ಥಾನದ ಕಮೀಟಿಯವರಿಗೆ ಇದೇ ವೇಳೆ ಮೃಣಾಲ ಹೆಬ್ಬಾಳಕರ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಲಪ್ರಭಾ ಗಾವಡೆ, ಲಕ್ಷ್ಮೀ ಗಾವಡೆ, ಚಬುತಾಯಿ ಕಾಂಬಳೆ, ಪ್ರಾಚಿ ಗಂಗೂಬಾಯಿ, ಅರುಣ ಗಾವಡೆ, ಮಲ್ಲಪ್ಪ ಗಾವಡೆ, ನಾರಾಯಣ ಚೌಹಾಣ, ಅರುಣ ಬೋಗನ್, ನಾರಾಯಣ ಭಾಂಡ್ಗೆ, ಜಯವಂತ ಸಾವಂತ, ಮಾರುತಿ ಖಾದರವಾಡ್ಕರ್, ಗಜಾನನ ಮೋರೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ