ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ಜಲಜೀವನ ಮಿಷನ್(ಜೆಜೆಎಂ) ಯೋಜನೆಯಡಿ ಗ್ರಾಮೀಣ ಕುಡಿಯುವ ನೀರಿನ ನೀರು ಸರಬರಾಜು ಇಲಾಖೆಯಿಂದ ೨೦೨೨-೨೩ನೇ ಸಾಲಿನಲ್ಲಿ ತಾಲ್ಲೂಕಿಗೆ ಫೇಸ್ ೧ ಮತ್ತು ೨ನೇ ಹಂತದ ರೂ.೯೮.೪೦ ಕೋಟಿ ಅನುದಾನ ಮಂಜೂರಾಗಿದೆ. ಇವುಗಳಲ್ಲಿ ಕೆಲ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿದ್ದು ಇನ್ನುಳಿದ ಕಡೆ ಶೀಘ್ರದಲ್ಲೆ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸ್ಥಳೀಯ ಅವರ ಕಾರ್ಯಾಲಯದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಬೇಡಕಿಹಾಳ ಗ್ರಾಮದಲ್ಲಿ ೨೫೭೮ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ನಳ ಅಳವಡಿಸಲು ರೂ.೫ ಕೋಟಿ, ಭೋಜದಲ್ಲಿ ೨೪೦೬ ಮನೆಗಳಿಗಾಗಿ ರೂ.೪.೯೯ ಕೋಟಿ, ಅಕ್ಕೋಳದಲ್ಲಿ ೧೪೯೬ ಮನೆಗಳಿಗಾಗಿ ರೂ.೪.೩೦ ಕೋಟಿ, ಕಾರದಗಾದಲ್ಲಿ ೧೪೧೯ ಮನೆಗಳಿಗಾಗಿ ರೂ.೩.೮೮ ಕೋಟಿ, ಮಾಮಗೂರದಲ್ಲಿ ೧೫೨೧ ಮನೆಗಳಿಗಾಗಿ ರೂ.೩.೩೬ ಕೋಟಿ, ಗಳತಗಾ ಗ್ರಾಮದಲ್ಲಿ ೨೫೭೩ ಮನೆಗಳಿಗಾಗಿ ರೂ.೩.೩೫ ಕೋಟಿ, ಕೋಡಣಿಯಲ್ಲಿ ೧೧೦೩ ಮನೆಗಳಿಗಾಗಿ ರೂ.೩.೨೮ ಕೋಟಿ, ಕುರ್ಲಿಯಲ್ಲಿ ೧೪೫೨ ಮನೆಗಳಿಗಾಗಿ ರೂ.೩.೨೫ ಕೋಟಿ, ಜತ್ರಾಟದಲ್ಲಿ ೧೦೭೦ ಮನೆಗಳಿಗಾಗಿ ರೂ.೩.೧೪ ಕೋಟಿ, ಹುನ್ನರಗಿಯಲ್ಲಿ ೧೨೦೦ ಮನೆಗಳಿಗಾಗಿ ರೂ.೨.೯೮ ಕೋಟಿ, ಡೋಣೆವಾಡಿಯಲ್ಲಿ ೭೧೨ ಮನೆಗಳಿಗಾಗಿ ರೂ.೨.೫೦ ಕೋಟಿ, ಕುನ್ನೂರ ಗ್ರಾಮದಲ್ಲಿ ೧೪೮೪ ಮನೆಗಳಿಗಾಗಿ ರೂ.೨.೫೦ ಕೋಟಿ, ಮಾಣಕಾಪೂರದಲ್ಲಿ ೨೪೨೭ ಮನೆಗಳಿಗಾಗಿ ರೂ.೨.೫೦ ಕೋಟಿ,
ಬೆನಾಡಿಯಲ್ಲಿ ೧೨೩೪ ಮನೆಗಳಿಗಾಗಿ ರೂ.೨.೫೦ ಕೋಟಿ, ಹಂಚಿನಾಳ(ಕೆ.ಎಸ್.)ನಲ್ಲಿ ೭೩೮ ಮನೆಗಳಿಗಾಗಿ ರೂ.೨.೨೫ ಕೋಟಿ, ಯರನಾಳದಲ್ಲಿ ೭೭೪ ಮನೆಗಳಿಗಾಗಿ ರೂ.೨.೨೨ ಕೋಟಿ, ಸಿದ್ನಾಳದಲ್ಲಿ ೫೦೬ ಮನೆಗಳಿಗಾಗಿ ರೂ.೨.೨೦ ಕೋಟಿ, ಅಪ್ಪಾಚಿವಾಡಿಯಲ್ಲಿ ೬೪೫ ಮನೆಗಳಿಗಾಗಿ ರೂ.೨.೧೬ ಕೋಟಿ, ಮಮದಾಪೂರ(ಕೆ.ಎಲ್.)ದಲ್ಲಿ ೮೪೫ ಮನೆಗಳಿಗಾಗಿ ರೂ.೨.೧೫ ಕೋಟಿ, ಶಿರದವಾಡದಲ್ಲಿ ೫೮೭ ಮನೆಗಳಿಗಾಗಿ ರೂ.೨.೧೪ ಕೋಟಿ, ಬೋರಗಾವವಾಡಿಯಲ್ಲಿ ೬೦೦ಕ್ಕೂ ಅಧಿಕ ಮನೆಗಳಿಗಾಗಿ ರೂ.೨.೦೪ ಕೋಟಿ, ಬಾರವಾಡದಲ್ಲಿ ೬೩೭ ಮನೆಗಳಿಗಾಗಿ ರೂ.೧.೯೭ ಕೋಟಿ, ಯಮಗಣ ಯಲ್ಲಿ ೪೪೦ ಮನೆಗಳಿಗಾಗಿ ರೂ.೧.೯೫ ಕೋಟಿ, ಶಿರಗುಪ್ಪಿಯಲ್ಲಿ ೬೩೫ ಮನೆಗಳಿಗಾಗಿ ರೂ.೧.೯೧ ಕೋಟಿ, ಆಡಿಯಲ್ಲಿ ೬೪೨ ಮನೆಗಳಿಗಾಗಿ ರೂ.೧.೮೮ ಕೋಟಿ, ಭಾಟನಾಗನೂರದಲ್ಲಿ ೪೧೫ ಮನೆಗಳಿಗಾಗಿ ರೂ.೧.೭೫ ಕೋಟಿ, ಶೇಮಡೂರದಲ್ಲಿ ೫೫೨ ಮನೆಗಳಿಗಾಗಿ ರೂ.೧.೬೨ ಕೋಟಿ, ಕೊಗನೋಳಿಯಲ್ಲಿ ೧೪೮೧ ಮನೆಗಳಿಗಾಗಿ ರೂ.೧.೪೩ ಕೋಟಿ, ನಾಗನೂರದಲ್ಲಿ ೬೧೨ ಮನೆಗಳಿಗಾಗಿ ರೂ.೧.೪೧ ಕೋಟಿ, ಭಿವಶಿಯಲ್ಲಿ ೪೯೧ ಮನೆಗಳಿಗಾಗಿ ೧.೩೪ ಕೋಟಿ, ಬೂಧಿಹಾಳದಲ್ಲಿ ೪೭೮ ಮನೆಗಳಿಗಾಗಿ ರೂ.೧.೨೨ ಕೋಟಿ ಸೇರಿದಂತೆ ೫೪ ಕಾಮಗಾರಿಗಳಿಗೆ ಒಟ್ಟು ರೂ.೯೮.೪೦ ಕೋಟಿ ಅನುದಾನ ಅನುಮೋದನೆಗೊಂಡಿದೆ ಎಂದರು.
ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಈ ಅನುದಾನದಲ್ಲಿ ಕೇಂದ್ರ ಸರ್ಕಾರದಿಂದ ಶೇ.೬೦ರಷ್ಟು ಹಾಗೂ ರಾಜ್ಯ ಸರ್ಕಾರದಿಂದ ಶೇ.೪೦ರಷ್ಟು ಅನುದಾನ ಬಂದಿದೆ. ಇದರಲ್ಲಿ ಆಡಿ, ಬಢಕಿಹಾಳ, ಶಮನೆವಾಡಿ, ಬೂಧಿಹಾಳ, ಮಾಣಕಾಪೂರ, ಕಸನಾಳ, ಶೇಂಡೂರ, ಮೊದಲಾದ ಗ್ರಾಮಗಳ ಸಹಿತ ಗುಡ್ಡಗಾಡು ಪ್ರದೇಶಗಳಲ್ಲಿಯ ಬಹುಗ್ರಾಮ ಯೋಜನೆಯ ಪುನಶ್ಚೇತನಗೊಳಿಸಲು ರೂ.೪.೮೬ ಕೋಟಿ ಅನುದಾನ ಒಳಗೊಂಡಿದೆ. ಕ್ಷೇತ್ರದ ಜನತೆಯ ಆಶಿರ್ವಾದದಿಂದ ಅಭಿವೃದ್ಧಿ ಕಾಮಗಾರಿಗಳು ನಮ್ಮಿಂದ ಹೀಗೆಯೇ ಮುಂದುವರೆಯಲಿವೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ನೀತಾ ಬಾಗಡೆ, ಸದಸ್ಯೆ ಉಪಾಸನಾ ಗಾರವೆ, ಮೊದಲಾದವರು ಸಹಿತ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
https://pragati.taskdun.com/assembly-elections-preparations-begin-in-belgaum/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ