Kannada NewsLatest

ಆರ್‌ಎಸ್‌ಎಸ್ ಬಲಗೊಳ್ಳುವುದು ಬೇರೆಯವರನ್ನು ಹೆದರಿಸಲಿಕ್ಕಲ್ಲ; ಸು. ರಾಮಣ್ಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ವರ್ಷ ಆರ್ ಎಸ್‌ಎಸ್ ಸ್ವಯಂ ಸೇವಕರ ಸಂಖ್ಯೆ ಹಿಂದೆಂದಿಗಿಂತ ಹೆಚ್ಚಾಗಿದೆ. ಪಥ ಸಂಚಲನವನ್ನು ಸ್ವಾಗತಿಸುವವರ ಸಂಖ್ಯೆಯೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬೆಳೆಯುತ್ತಿದ್ದು, ಜನ ಹೆಚ್ಚು ಸಂಘೀಯರಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮರಣ್ಣ ಹೇಳಿದರು.

ಆರ್‌ಎಸ್‌ಎಸ್ ಪಥ ಸಂಚಲನದ ಅಂಗವಾಗಿ ಬೆಳಗಾವಿಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಬಲಿಷ್ಠವಾಗುತ್ತಿರುವುದು ಯಾರನ್ನಾದರೂ ಹೆದರಿಸುವ, ಎಚ್ಚರಿಕೆ ನೀಡುವ ಉದ್ದೇಶದಿಂದಲ್ಲ. ರಾಷ್ಟ್ರ ಧರ್ಮದ ರಕ್ಷಣೆ ಸಂಘದ ಉದ್ದೇಶ. ಧರ್ಮ ರಕ್ಷಣೆಯೆಂದರೆ ಯಾವುದೋ ಒಂದು ಮತದ ರಕ್ಷಣೆಯಲ್ಲ. ದೇಶದ ರಕ್ಷಣೆಯೇ ರಾಷ್ಟ್ರ ಧರ್ಮದ ರಕ್ಷಣೆ ಎಂದು ವಿವರಿಸಿದರು.

ಅನ್ಯ ಧರ್ಮದವರು ಸಂಘಟಿತರಾಗುತ್ತಾರೆ. ಅದನ್ನು ತಪ್ಪು ಎನ್ನಲಾಗದು. ಆದರೆ ಹಿಂದೂಗಳು ಸಂಘಟಿತರಾದರೆ ಕೆಲವರು ಮೂಗೆಳೆಯುತ್ತಾರೆ. ಮೊದಲು ಹಿಂದು- ಹಿಂದು ಭಾಯಿ ಭಾಯಿ ಆಗಬೇಕು. ಆ ಬಳಿಕ ಹಿಂದು -ಮುಸ್ಲಿಮರು ಭಾಯಿ ಭಾಯಿ ಆಗಲು ಸಾಧ್ಯ. ಹಿಂದುಗಳಲ್ಲೇ ಒಗ್ಗಟ್ಟಿಲ್ಲದಿದ್ದರೆ ಮುಸ್ಲಿಮರು ಹಿಂದುಗಳನ್ನು ನಂಬಲು ಸಾಧ್ಯವಿಲ್ಲ. ಈ ಮಾತನ್ನು ಗುರೂಜಿ ಅವರು ಅಂದು ಗಾಂದೀಜಿಯವರಿಗೆ ಹೇಳಿದ್ದರು. ಅದು ಇಂದಿಗೂ ಪ್ರಸ್ತುತವಾಗಿದೆ ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಜಿ.ಧಾರವಾಡ ಅವರು ಪುಸ್ತಕ ಬಿಡುಗಡೆಗೊಳಿಸಿದರು. ನಗರ ಸಂಘಚಾಲಕ ಬಾಳಣ್ಣ ಕಗ್ಗಣಗಿ ಇದ್ದರು.

ಮಧ್ಯಾಹ್ನ 3.30 ರಿಂದ ಆರ್‌ಎಸ್‌ಎಸ್ ಬೆಳಗಾವಿ ಘಟಕದ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. 1300 ಕ್ಕೂ ಹೆಚ್ಚು ಸ್ವಯಂ ಸೇವಕರು ಗಣವೇಷ ಧರಿಸಿ ಪಥಸಂಚಲನ ನಡೆಸಿದರು.

ರಾಜ್ಯದ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ – ಡಿ.ಕೆ.ಶಿವಕುಮಾರ

https://pragati.taskdun.com/politics/sarvodaya-samaveshacongressd-k-shivakumarmallikarjuna-kharge/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button