Kannada NewsKarnataka News

ಕೊರೋನಾ ಸಂಕಷ್ಟದಲ್ಲಿ ಸಂಘಪರಿವಾರದ ಜನಸೇವಾ ಕಾರ್ಯ

ಬೆಳಗಾವಿ ನಗರದ 3 ಕಡೆ ಉಪಚಾರ ಕೇಂದ್ರ

 

ರಾಷ್ಟ್ರ ಮತ್ತು ಸಮಾಜಕ್ಕೆ ಸಂಕಷ್ಟಕ್ಕೆ ಎದುರಾದಾಗ, ಆರ್‌ಎಸ್‌ಎಸ್ ಸಮಾಜದ ನೆರವಿಗೆ ಧಾವಿಸಿದೆ. ಭಾರತ ನೆರೆ ರಾಷ್ಟ್ರಗಳಿಂದ ಎದುರಿಸಿದ ಯುದ್ಧದ ಸಂದರ್ಭದಲ್ಲಿ ಮತ್ತು ಪ್ರಕೃತಿ ವಿಕೋಪಗಳಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಸಾಮಾನ್ಯ ಜನರ ಮತ್ತು ಸಮಾಜದ ರಕ್ಷಣೆಗೆ ಅವಿರತ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಅದರಂತೆ, ಈ ಬಾರಿ ಕೋವಿಡ್ ಮಹಾಮಾರಿಯ ಪರಿಣಾಮ ಸಮಸ್ತ ನಾಡು ಮತ್ತು ಸಮಾಜ ಆರೋಗ್ಯ ಸಮಸ್ಯೆ ಅಷ್ಟೆ ಅಲ್ಲದೆ ಅನೇಕ ಸಮಸ್ಯೆಗಳಗೆ ಪರಿಹಾರ ಒದಗಿಸುವಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಬೆಳಗಾವಿ ನಗರದಲ್ಲಿ ವಿವಿಧ ಸೇವಾಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕೋವಿಡ್ ಆರೈಕೆ (ಐಸೋಲೇಷನ್ ) ಕೇಂದ್ರ


ಕೊವಿಡ್ ೨ನೇ ಅಲೆಯ ಅಪ್ಪಳಿಸಿದ ಕೆಲವೆ ದಿನಗಳಲ್ಲಿ, ಆರ್‌ಎಸ್‌ಎಸ್ ಸಂಚಾಲಿತ ಜನ ಕಲ್ಯಾಣ ಟ್ರಸ್ಟ ನೇತೃತ್ವದಲ್ಲಿ ಅಡಿಯಲ್ಲಿ ಆರ್‌ಪಿಡಿ ವೃತ್ತದ ಹತ್ತಿರದ ಹತ್ತಿರದಲ್ಲಿರುವ ಉದಯ ಭುವನ ಕಟ್ಟಡದಲ್ಲಿ ೩೦ ಬೆಡ್ ಇರುವ ಕೊವಿಡ್ ಐಸೋಲೆಷನ್ ಕೇಂದ್ರ ಆರಂಭಿಸಲಾಯಿತು. ಸ್ವಯಂಸೇವಕರಿಂದ ತ್ವರಿತವಾಗಿ ಕಾರ್ಯ ಪ್ರಾರಂಭಿಸಲಾಯಿತು, ಕೆಲವೆ ದಿನಗಳಲ್ಲಿ ಎಲ್ಲ ಬೆಡ್ ಪೂರ್ಣವಾಗಿ ತುಂಬಿದ್ದರಿಂದ ಸಮಾಜದಲ್ಲಿ ಇನ್ನು ಅವಶ್ಯಕತೆ ಕಂಡು, ಜನ ಕಲ್ಯಾಣ ಟ್ರಸ್ಟನ ಸಂತ ಮೀರಾ ಶಾಲೆಯಲ್ಲಿ ೫೦ ಹಾಸಿಗೆ ವ್ಯವಸ್ಥೆಯ ಬೆಡ್ ಎರಡನೇಯ ಕೋವಿಡ್ -೧೯ ಉಪಚಾರ ಕೇಂದ್ರ (ಐಸೋಲೆಷನ್ ಸೆಂಟರ್) ಪ್ರಾರಂಭಿಸಲಾಯಿತು. ಒಂದನೆ ಅಲೆಯಲ್ಲಿ ಮಾಡಿದ ಕಾರ್ಯದ ಅನುಭವ ಈ ಸಮಯದಲ್ಲಿ ಬಹಳ ಸಹಾಯವಾಯಿತು. ಈಗ ಸದ್ಯ ೨೫ ಮತ್ತು ೪೮ ಬೆಡಗಳಂತೆ ಎರಡು ಕಡೆ ಕಾರ್ಯನಡೆಸಲಾಗುತ್ತಿದೆ. ಒಟ್ಟಾರೆ ಇಲ್ಲಿಯವರೆಗೆ ೨೯೬ ಸೋಂಕಿತ ಜನರು ಕೇಂದ್ರದಲ್ಲಿ ಉಪಚಾರಕ್ಕೆ ದಾಖಲಾಗಿದ್ದರು. ಅವರಲ್ಲಿ ೨೩೬ ಜನ ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ, ಸದ್ಯ ೬೦ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೆ ಸಮಯದಲ್ಲಿ ಆಕ್ಸಿಜನ್ ವ್ಯವಸ್ಥೆ ಹೊಂದಿದ ಬೆಡ್ ಬೇಡಿಕೆ ಹೆಚ್ಚಾಗಿರುವುದನ್ನು ಮನಗಂಡು ಜನಕಲ್ಯಾಣ ಟ್ರಸ್ಟ್ ಸಂಚಾಲಿತ ಎರಡು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ೧೦ ಬೆಡ್‌ಗಳಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಯಿತು.  ಇಲ್ಲಿಯವರೆಗೆ ಯಾವುದೇ ಸೋಂಕಿತರ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸ ಉಂಟಾಗದೆ, ಸಾವು-ನೋವು ಸಂಭವಿಸಿಲ್ಲ ಎನ್ನುವುದು ಒಂದು ಸಂತಸದ ಸಂಗತಿ. ಇನ್ನು ಒಂದು ವಿಶೇಷತೆ ಎಂದರೆ ೨೩ ಕೋವಿಡ್ ಸ್ಕೋರ್ ಇರುವ ಸೋಂಕಿತ ವ್ಯಕ್ತಿಗೆ ಬೇರೆ ಯಾವ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಇಲ್ಲಿ ಚಿಕಿತ್ಸೆ ಪಡೆದಿದ್ದು, ವೆಂಟಿಲೆಟರ ಅವಶ್ಯಕತೆ ಇಲ್ಲದೆ ಕೇವಲ ಆಕ್ಷಿಜನ ಸಹಾಯದಿಂದ ಗುಣಮುಖರಾಗಿ ತೆರಳಿದ್ದು ಒಂದು ಒಳ್ಳೆಯ ಸಂಗತಿ. ಇವತ್ತಿಗೂ ೫೦ ಕ್ಕಿಂತ ಹೆಚ್ಚಿನ ಸ್ವಯಂಸೇವಕ ಕಾರ್ಯಕರ್ತರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿದ್ದಾರೆ.

ಆಕ್ಷಿಜನ್ ಸಿಲಿಂಡರ್ ವ್ಯವಸ್ಥೆ

ಕೋವಿಡ್ ಎರಡನೇಯ ಅಲೆಯ ಸಂದರ್ಭದಲ್ಲಿ ಅತಿ ಹೆಚ್ಚು ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಸೋಂಕಿತರ ಚಿಕಿತ್ಸೆಗೆ ಅವಶ್ಯವಾಯಿತು. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಆಗಿದ್ದರಿಂದ ಹೆಚ್ಚಿನ ಜನರನ್ನು ಮನೆಯಲ್ಲಿಯೆ ಐಸೋಲೇಷನ್  ಮಾಡಿಕೊಳ್ಳಲು ತಿಳಿಸಲಾಯಿತು. ಈ ಸಂದರ್ಭದಲ್ಲಿ ಮನೆಯಲ್ಲಿರುವವರಿಗೆ ಅಕ್ಸಿಜನ ಅವಶ್ಯಕತೆ ಎದುರಾದ ಹಿನ್ನೆಲೆಯಲ್ಲಿ, ಆರ್‌ಎಸ್‌ಎಸ್ ಈ ಕಾರ್ಯವನ್ನು ಕೈಗೆತ್ತುಕೊಂಡು ೩೨೯ ಜಂಬೋ ಸಿಲಿಂಡರಗಳನ್ನ ೧೮೭ ಜನ ರೋಗಿಗಳ ಮನೆ ಮನೆಗೆ ಇಲ್ಲಿಯವರೆಗೆ ತಲುಪಿಸಿದೆ. ಕಾರಣಾಂತರಗಳಿಂದ ಸರ್ಕಾರ ಎನ್‌ಜಿಒ ಗಳಿಗೆ ಆಕ್ಸಿಜನ್ ಕೊಡಬಾರದೆಂಬ ನಿಯಮ ತಂದ ನಂತರ ಈ ಕಾರ್ಯ ಸ್ವಲ್ಪ ಕುಂಟಿತವಾಗಿ ಕೇವಲ ಐಸೋಲೆಷನ್   ಕೇಂದ್ರದಲ್ಲಿ ಇದರ ವ್ಯವಸ್ಥೆ ಸೀಮಿತವಾಯಿತು. ಕೆಲವು ದಿನಗಳ ಹಿಂದಷ್ಟೆ ೧೦ ಆಕ್ಸಿಜನ್ ಕಾನ್ಸ್ಂಟ್ರೇಟರ್ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ. ಇಲ್ಲಿಯವರೆಗೆ ಅವಶ್ಯವಿದ್ದ ಹೊಮ್ ಐಸೊಲೇಷನ್  ಆದ ೧೧ ಸೋಂಕಿತರಿಗೆ ಒದಗಿಸಲಾಗಿದೆ. ಈ ಕಾರ್ಯದಲ್ಲಿ ಸ್ವಯಂಸೇವಕ ಕಾರ್ಯಕರ್ತರು ರಾತ್ರಿ ಹಗಲು ಅವಿರತವಾಗಿ ಎನ್ನದೆ ಮನೆ ಮನೆಗೆ ಹೋಗಿ ಸೋಂಕಿತರ ಪರಿವಾರದ ಸದಸ್ಯರ ಬೇಡಿಕೆಗೆ ಸ್ಪಂದಿಸಿ ಕಾರ್ಯಮಾಡಿದ್ದಾರೆ.

ರಕ್ತದಾನ ಶಿಬಿರ
ಮೇ ತಿಂಗಳಲ್ಲಿ ಸರ್ಕಾರದ ವಾಕ್ಸಿನೇಶನ್ ಕಾರ್ಯ ಪ್ರಾರಂಭಿಸುವ ಸೂಚನೆ ದೊರೆತ ನಂತರ ವಾಕ್ಸಿನ್ ತೆಗೆದುಕೊಂಡವರು ರಕ್ತ ನೀಡಲು ೩ ತಿಂಗಳುಗಳ ಕಾಲ ಸಾದ್ಯವಿಲ್ಲದ ಕಾರಣ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಉಂಟಾಗಬಹುದು ಮತ್ತು ರಕ್ತದ ಕೊರತೆ ಸಮಸ್ಯೆ ಎದುರಾಗಬಹುದು ಎಂಬ ಆರ್‌ಎಸ್‌ಎಸ್ ಅಂದಾಜಿಸಿತು. ಈ ಹಿನ್ನೆಲೆಯಲ್ಲಿ ಹನುಮಾನ ನಗರ, ಮಹಾಂತೇಶ ನಗರ, ಸದಾಶಿವ ನಗರ, ಅನಗೋಳ, ಶಹಾಪುರ, ಟಿಳಕವಾಡಿ, ವಡಗಾಂವ ಸೇರಿದಂತೆ ನಗರದ ೧೦ ಕಡೆಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಯಿತು. ಸಮಾಜದ ಅವಶ್ಯಕತೆ ಅರಿತು ಮತ್ತು ಆರ್‌ಎಸ್‌ಎಸ್ ಕರೆಗೆ ಓಗೊಟ್ಟ ಸ್ವಯಂಸೇವಕರು, ಸಮಾಜದ ಜನರು ಮತ್ತು ಮಾತಾ-ಭಗಿನಿಯರು ಸೇರಿದಂತೆ ಒಟ್ಟಾರೆ ೭೧೫ ಯುನಿಟ್ ರಕ್ತದಾನ ಮಾಡಿದ್ದಾರೆ. ಇದೆ ಸಂಧರ್ಭದಲ್ಲಿ ಆಸ್ಪತ್ರೆಯಲ್ಲಿ ಅವಶ್ಯವಿದ್ದ ರೊಗಿಗಳ ಸಹಾಯಕ್ಕಾಗಿ ೬ ಸ್ವಯಂಸೇವಕರು ಪ್ಲೆಟಲೆಟ್ ಕೊಟ್ಟು ಸಹಕರಿಸಿದ್ದಾರೆ.

ದೂರವಾಣಿ ಸಹಾಯ ಕೇಂದ್ರ

ಆರ್‌ಎಸ್‌ಎಸ್ ನೇತೃತ್ವದಲ್ಲಿ ಪ್ರಾರಂಭಿಸಿದ ವಿವಿಧ ಸೇವಾ ಕಾರ್ಯಗಳ ಮಾಹಿತಿ ಮತ್ತು ಉಪಯೋಗ ಪಡೆಯಲು ಸಾರ್ವಜನಿಕರಿಗಾಗಿ ಸಹಾಯವಾಣ (ಹೆಲ್ಪಲೈನ್) ಕೇಂದ್ರ ಮೊ: ೮೭೭೯೧೮೧೮೯೧ ಸ್ಥಾಪಿಸಲಾಗಿತ್ತು ಮತ್ತು ಈವರೆಗೆ ೨೪೯೭ಕರೆಗಳನ್ನು ಸ್ವೀಕರಿಸಲಾಗಿದೆ. ಕೊವಿಡ್ ಐಸೋಲೇಷನ್   ಕೇಂದ್ರದಲ್ಲಿ ಬೆಡಗಾಗಿ ೨೬%, ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ೩೩%, ಶವಸಂಸ್ಕಾರ ಸೇವೆಗಾಗಿ ೧೧%, ಅತಿ ಉಪಯೋಗಿ ಔಷದದ ಬೇಡಿಕೆಗಾಗಿ ೧೦%, ವೈದ್ಯರ ಮಾರ್ಗದರ್ಶನಕ್ಕಾಗಿ ೬%, ಸಂಜೀವಿನಿ ಕಾಡಾ ಖರೀದಿಗೆ ೪% ಸಿಟಿ ಸ್ಕ್ಯಾನ/ಟೆಸ್ಟಿಂಗ್ ಸೆಂಟರ ಮಾಹಿತಿಗಾಗಿ ೨% ಆಹಾರದ ಅವಶ್ಯಕತೆಗಾಗಿ ೨% ಇನ್ನಿತರೆ ಸೇವೆಗಳಿಗಾಗಿ ೬% ಕರೆಗಳು ಬಂದಿದ್ದಾವೆ. ಅತೀ ಹೆಚ್ಚು ಕರೆಗಳು ಮೇ೧ ರಿಂದ ೧೦ ನೇ ತಾರಿಖಿನ ನಡುವೆ ಬಂದದ್ದು ಉಲ್ಲೆಖನೀಯ. ೯ ಜನ ವೈದ್ಯರ ತಂಡ ಬೆಳಗ್ಗೆ ೯ ರಿಂದ ಸಾಯಂಕಾಲ ೬ ರ ವರೆಗೆ ಅವಶ್ಯಕತೆ ಇದ್ದವರಿಗೆ ಆನಲೈನ್ ಕನ್ಸಲ್ಟೇಶನ್ ಉಚಿತವಾಗಿ ಕೊಡುತ್ತಿದ್ದು, ಇಲ್ಲಿಯವರಿಗೆ ಕರೆಮಾಡಿದ ೫೦೦ ಜನಕ್ಕೆ ಈ ಸೌಲಭ್ಯ ದೊರೆತಿದೆ.

ಶವಸಂಸ್ಕಾರ ಮತ್ತು ಆಂಬುಲೆನ್ಸ್ ವ್ಯವಸ್ಥೆ


ನಗರದಲ್ಲಿ ರೋಗಿಗಳಿಗಾಗಿ ಆಂಬುಲೆನ್ಸ್ ವ್ಯವಸ್ಥೆ ಕೊರತೆ ಅರಿತು, ಒಟ್ಟು ೭ ಆಂಬುಲೆನ್ಸ್ ಆರ್‌ಎಸ್‌ಎಸ್ ಕಡೆಯಿಂದ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ೨ ವಾಹನ ಕೊವಿಡ ಸೋಂಕಿತರನ್ನು ಆಸ್ಪತ್ರೆಗೆ/ ಕೋವಿಡ್ ಕೇರ್ ಸೆಂಟರ್ ತಲುಪಿಸುವ ಕಾರ್ಯದಲ್ಲಿ ನಿರತವಾಗಿದ್ದು, ಹಗಲು ರಾತ್ರಿ ಎನ್ನದೆ, ಇಲ್ಲಿನವರೆಗೆ ಒಟ್ಟಾರೆ ೧೩೭ ಜನ ಕೊವಿಡ ರೋಗಿಗಳ ಸಹಾಯ ಮಾಡಲಾಗಿದೆ. ೪ ವಾಹನಗಳು ಮೃತರ ಅಂತ್ಯಸಂಸ್ಕಾರಕ್ಕಾಗಿ ಸದಾಕಾಲ ಸಿದ್ದವಾಗಿ ನಿಂತಿರುತ್ತವೆ. ಇಲ್ಲಿಯವರೆಗೆ ಈ ತಂಡಗಳು ೨೪೯ ಶವಸಂಸ್ಕಾರಗಳನ್ನ ಮಾಡಿದ್ದು, ಸಮಾಜದ ಕಷ್ಟಕ್ಕೆ ಹೆಗಲು ಕೊಟ್ಟು ಕಾರ್ಯತತ್ಪರವಾಗಿವೆ.
ಅಂತ್ಯಸಂಸ್ಕಾರದ ಸೇವಾಕಾರ್ಯ ಯಾವುದು ಶುಲ್ಕವಿಲ್ಲದೆ ಮಾಡಲಾಗುತ್ತಿದೆ. ಕೆಲವು ಬಾರಿ ಪರಿವಾರಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಶವಸಂಸ್ಕಾರಕ್ಕಾಗಿ ಅಂತ್ಯಕ್ರಿಯೆಯ ಸಾಮಗ್ರಿಯ ವ್ಯವಸ್ಥೆಯನ್ನು ಕೂಡಾ ಸ್ವಯಂಸೇವಕರೆ ಭರಿಸುತ್ತಿದ್ದಾರೆ. ಈ ತಂಡಗಳಲ್ಲಿ ಅತಿ ಹೆಚ್ಚು ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತನ ೯೦ ಯುವ ಕಾರ್ಯಕರ್ತರು ೧೦ತಂಡಗಳಲ್ಲಿ ಕಾರ್ಯನಿರ್ವಹಿತ್ತಿದ್ದಾರೆ. ಇವರ ಆರೋಗ್ಯದ ದೃಷ್ಟಿಯಿಂದ ಆಯುರ್ವೇದ ಕಾಡಾ, ಕಷಾಯ ಪ್ರತಿ ನಿತ್ಯ ಸೇವನೆಗೆ ನೀಡಲಾಗುತ್ತಿದೆ. ಪ್ರತಿ ೨ ದಿನಕ್ಕೊಮ್ಮೆ ವೈದ್ಯರಿಂದ ಪರಿಶೀಲನೆ ನಡೆಸಲಾಗುತ್ತದೆ, ವ್ಯಾಕ್ಸಿನೆಶನ್ ಸಹ ಆದ್ಯತೆಯ ಮೇರೆಗೆ ಮಾಡಿಸಲಾಗಿದೆ. ಒಂದು ಆಂಬುಲೆನ್ಸ್ ರೋಗಿ ಇದ್ದಲ್ಲಿಗೆ ಹೋಗಿ ಚಿಕಿತ್ಸೆ ಒದಗಿಸುವ ಕಾರ್ಯದಲ್ಲಿ ನಿರತವಾಗಿದ್ದು, ೯೮ ರೋಗಿಗಳಿಗೆ ಇಲ್ಲಿಯವರೆಗೆ ಸೇವೆ ನೀಡಲಾಗಿದೆ. ಈ ಕಾರ್ಯದಲ್ಲಿ ಸತತವಾಗಿ ೩ ವೈದ್ಯರನ್ನು ಒಳಗೊಂಡ ತಂಡಗಳು ಶಿಫ್ಟ್ ಪ್ರಕಾರ ಕಾರ್ಯ ಮಾಡುತ್ತಿದ್ದು, ಇದರಲ್ಲಿ ಯುತ್ ಪಾರ್ ಸೇವಾ ಕಾರ್ಯಕರ್ತರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ. ಈ ತಂಡವೇ ಜೂನ ೨ನೇ ತಾರೀಖಿನಂದು ಖಾನಾಪುರ ತಾಲೂಕಿನ ಹುಲಿಕೊಟ್ಟಲು ಗ್ರಾಮದಲ್ಲಿ ಆರೋಗ್ಯ ಚಿಕಿತ್ಸಾ ಕ್ಯಾಂಪ ಮಾಡಿ ೨೦೫ ಗ್ರಾಮಸ್ಥರು ಆರೊಗ್ಯ ತಪಾಸಣೆ ಮಾಡಿ ಈ ವ್ಯವಸ್ಥೆಯ ಸದುಪಯೊಗ ಪಡೆದುಕೊಂಡರು.

ಈಗಿರುವ ಸಂದರ್ಭದಲ್ಲಿ ರೋಗ ನಿವಾರಣೆಯ ಜೊತೆಗೆ, ರೋಗ ಹರಡುವುದನ್ನು ತಡೆಯುವುದು ಅಷ್ಟೆ ಮಹತ್ವದ್ದಾಗಿದೆ. ಆ ನಿಟ್ಟಿನಲ್ಲಿ ನಗರದಲ್ಲಿ ೧೨೪ ಅಲೊಪತಿ ಔಷಧಿಯ ಕಿಟ್ ಗಳನ್ನು ಕೊಡಲಾಗಿದೆ. ಕನೇರಿಮಠದಲ್ಲಿ ತಯಾರಿಸಿರುವ ಔಷಧವನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ದೃಷ್ಟಿಯಿಂದ ೨೫೬೯೬ ಬಾಟಲ್‌ಗಳನ್ನು ನಗರದ ವಿವಿಧೆಡೆ ಹಂಚಲಾಗಿದೆ. ಈ ಕಾರ್ಯದಲ್ಲಿ ಭಾಜಪಾ ಕಾರ್ಯಕರ್ತರು ಕೈ ಜೋಡಿಸಿ ಅತಿ ಹೆಚ್ಚು ಜನರನ್ನು ತಲುಪುವಲ್ಲಿ ತಮ್ಮ ಪಾತ್ರ ವಹಿಸಿದ್ದಾರೆ. ಆಯುರ್ವೇದ ಕಷಾಯ ಪುಡಿಯನ್ನು ತಯಾರಿಸಿ ೧೦೦೦ ಕ್ಕೂ ಹೆಚ್ಚು ಮನೆಗಳಿಗೆ ನೀಡಲಾಗಿದೆ. ಹಂಚಲಾಗಿದ್ದು, ೫೬ ಸಂಜೀವಿನಿ ಕಾಡಾ ಬಾಟಲ್, ೧೦ ಆಯುರ್ವೇದ ಚೂರ್ಣ ಅವಶ್ಯವಿದ್ದವರಿಗೆ ಒದಗಿಸಲಾಗಿದೆ. ಇದಲ್ಲದೆ ೮ ಜನ ವೈದ್ಯರು ನಿರಂತರವಾಗಿ ರೋಗಿಗಳಿಗೆ ಫೋನ್ ಮುಖಾಂತರ ವಿವಿಧ ಬಗೆಯ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆಯ ಸಲಹೆ ನೀಡುವಲ್ಲಿ ನಿರತರಾಗಿದ್ದರೆ.

ಊಟದ ವ್ಯವಸ್ಥೆ


ಸಂಘದ ಕೊವಿಡ ಸೆಂಟರನಲ್ಲಿದ್ದ ರೋಗಿಗಳಿಗೆ ಪ್ರತಿ ನಿತ್ಯ ಊಟದ ವ್ಯವಸ್ಥೆ ಮಾಡುವದರ ಜೊತೆಗೆ, ನಗರದಲ್ಲಿ ಅವಶ್ಯವಿದ್ದವರಿಗಾಗಿ ೧೯೪೭ ಊಟದ ಪೊಟ್ಟಣಗಳ ವ್ಯವಸ್ಥೆ ಇಲ್ಲಿಯವರೆಗೆ ಮಾಡಲಾಗಿದೆ. ಕೆಲವು ಕುಟುಂಬಗಳು ತಿಂಗಳು ಗಳ ಕಾಲ ಸಂಪಾದನೆ ಇಲ್ಲದ ಕಾರಣ, ಅವರ ಅವಶ್ಯಕತೆಯನ್ನು ಕಂಡು ಇಲ್ಲಿಯವರೆಗೆ ೧೫೦ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಲಾಗಿದೆ. ಕೆಲವು ಕುಟುಂಬದ ಎಲ್ಲ ಸದಸ್ಯರಿಗೆ ಕೊವಿಡ್ ಸೋಂಕು ಬಂದ ಕಾರಣ ಮನೆಯಲ್ಲಿ ಆಹಾರ ತಯಾರಿಸುವ ಸಮಸ್ಯೆ ಎದುರಾಗಿದ್ದು ಕಂಡು, ಮನೆಗಳಲ್ಲಿಯೆ ಚೇತರಿಸಿಕೊಳ್ಳುವವರೆಗೆ ಆಹಾರ ವ್ಯವಸ್ಥೆ ಮಾಡಲಾಗಿದೆ. ಇವೆಲ್ಲದರ ಹೊರತಾಗಿ ಈವರೆಗೆ ಎರಡನೆಯ ಅಲೆಯ ಸಂಧರ್ಭದಲ್ಲಿ ೭೦೦೦ ಮಾಸ್ಕ್ ವಿತರಣೆ ಮಾಡಲಾಗಿದೆ. ಸರಕಾರದ ಕಡೆಯಿಂದ ಆಟೊರಿಕ್ಷಾ ಮತ್ತು ರಂಗಕಲಾವಿದರಿಗಾಗಿ ಧನರಾಶಿ ಘೊಷಿಸಿದ್ದು, ಅವರಿಗೆ ಆನಲೈನ್‌ನಲ್ಲಿ ಅರ್ಜಿ ತುಂಬುಲು ಸಹಾಯ ಮಾಡುವಲ್ಲಿಯು ಆರ್‌ಎಸ್‌ಎಸ್ ಸ್ವಯಂಸೇವಕರು ಕೈಜೋಡಿಸಿದ್ದಾರೆ.
ಸಮಸ್ತ ಸಮಾಜವು ತನ್ನ ಕುಟುಂಬ ಎಂದು ನಂಬಿರುವ ಸ್ವಯಂಸೇವಕರು, ನಮ್ಮನ್ನು ಅಗಲಿದ ಜನರ ಕುಟುಂಬಗಳಿಗೆ ಸಾಂತ್ವನ ಹೇಳಿ, ಕೊವಿಡ ಸೋಂಕು ತಗುಲಿದವರಿಗೆ ಮತ್ತು ಆ ಪರಿವಾರಗಳಲ್ಲಿ ಧೈರ್ಯ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವಶ್ಯಕತೆ ಇದ್ದಲ್ಲಿ ನುರಿತ ತಜ್ಞರಿಂದ ಕೌನ್ಸಲಿಂಗ್ ಸಹ ನಡೆಸಲಾಗುತ್ತಿದ್ದು ಇಲ್ಲಿಯವರೆಗೆ ೧೬೫ ಜನರ ಜೊತೆ ತಜ್ಞರು ಮಾತನಾಡಿದ್ದರೆ. ಬನ್ನಿ ಈ ಕಠಿಣ ಪರಿಸ್ಥಿತಿ ಯಲ್ಲಿ ನಮ್ಮ ಕೈಲಾದ ಸಹಾಯ ಮಾಡೋಣ.

ಯಾವುದೇ ಮಾಹಿತಿಗಾಗಿ ಅಥವಾ ಸೇವೆಯ ಅವಶ್ಯಕತೆಗಾಗಿ ೮೭೭೯೧೮೧೮೯೧ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ.

(ಮಾಹಿತಿ –

ರಾಷ್ಟ್ರೀಯ ಸ್ವಯಂಸೇವಕ ಸಂಘ, ಬೆಳಗಾವಿ ನಗರ
ಸೇವಾ ಭಾರತಿ, ಬೆಳಗಾವಿ
ಜನ ಕಲ್ಯಾಣ ಟ್ರಸ್ಟ, ಬೆಳಗಾವಿ.)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button