Latest

ಬಿಜೆಪಿ ಮುಖಂಡನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದಿದ್ದರೂ ರಾಜಕಿಯ ವೈಷಮ್ಯ ಮಾತ್ರ ಅಂತ್ಯವಾಗಿಲ್ಲ. ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯುತ್ತಲೇ ಇದೆ. ಇದೀಗ ಬಿಜೆಪಿ ಕಾರ್ಯಕರ್ತ, ಸ್ಥಳೀಯ ಮುಖಂಡ ಮಿಥುನ್ ಬಾಘ್ರಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಮಿಥುನ್ ಬಾಘ್ರಿ ಖೈರಶೋಲ್ ಗ್ರಾಮೀಣ ಮಂಡಳಿಯ ಸಹ ಅಧ್ಯಕ್ಷರಾಗಿದ್ದರು. ಬಿರ್ಭುಮ್ ನಲ್ಲಿ ಮಿಥುನ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ. ಟಿಎಂಸಿ ಕಾರ್ಯಕರ್ತರೇ ಬಿಜೆಪಿಯ ಕಾರ್ಯಕರ್ತನನ್ನು ಹತ್ಯೆ ಮಾಡಿರುವುದಾಗಿ ಬಿಜೆಪಿ ಆರೋಪಿಸಿದೆ.

Home add -Advt

ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೇ ಮಿಥುನ್ ಮೇಲೆ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿ.ಎಲ್.ಸಂತೋಷ್ ಜೊತೆ ಅರವಿಂದ್ ಬೆಲ್ಲದ್ ಚರ್ಚೆ

Related Articles

Back to top button