Latest

ಪತ್ನಿಯ ಎದುರೇ ಆರ್ ಎಸ್ ಎಸ್ ಮುಖಂಡನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಆರ್ ಎಸ್ ಎಸ್ ಸ್ಥಳೀಯ ಮುಖಂಡನೊಬ್ಬನನ್ನು ಪತ್ನಿಯ ಎದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಪುಳದಲ್ಲಿ ನಡೆದಿದೆ.

ಎಸ್.ಸಂಜಿತ್ (27) ಕೊಲೆಯಾದ ಆರ್ ಎಸ್ ಎಸ್ ಮುಖಂಡ. ಪತ್ನಿಯನ್ನು ಕೆಲಸಕ್ಕೆ ಕಳುಹಿಸಲು ತೆರಳುತ್ತಿದಾಗ ಮಂಬರಂ ಪ್ರದೇಶದಲ್ಲಿ ದುಷ್ಕರ್ಮಿಗಳು ಸಂಜಿತ್ ಮೇಲೆ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.

ಸಂಜಿತ್ ಹಾಗೂ ಅವರ ಪತ್ನಿ ತೆರಳುತ್ತಿದ್ದ ಬೈಕ್ ಗೆ ಡಿಕ್ಕಿಹೊಡೆದು ಬೀಳಿಸಿ ಬಳಿಕ ಸಂಜಿತ್ ನನ್ನು ಹಲವು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾರೆ.

ಕೊಲೆಯನ್ನು ಕಣ್ಣಾರೆ ಕಂಡ 56 ವರ್ಷದ ರಾಮು ಆಘಾತದಿಂದ ಕುಸಿದು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ಸಂಜಿತ್ ಹತ್ಯೆ ಹಿಂದೆ ಎಸ್ ಡಿಪಿಐ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಹಾಗೂ ಆರ್ ಎಸ್ ಎಸ್ ಅನುಮಾನ ವ್ಯಕ್ತಪಡಿಸಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button