Latest

ಈ ರೀತಿ ಮಾಡಿಯೇ ಕಾಂಗ್ರೆಸ್ ಎಲ್ಲೆಡೆ ನೆಲೆ ಕಳೆದುಕೊಂಡಿದೆ; ಸಿಎಂ ಬೊಮ್ಮಾಯಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಆರ್. ಎಸ್.ಎಸ್ ಚಡ್ಡಿ ಸುಡುವ ಅಭಿಯಾನ ಆರಂಭಿಸುತ್ತೇವೆ ಎಂದು ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಹೀಗೆ ಮಾಡಿಯೇ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲಿಯೂ ಅಧಿಕಾರ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತಾನಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಆರ್.ಎಸ್.ಎಸ್ ರಾಷ್ಟ್ರ ಭಕ್ತಿಗೆ ಹೆಸರಾದ ಸಂಸ್ಥೆ, ದೇಶದ ಸಂಸ್ಕೃತಿ, ದೇಶಸೇವೆಯೇ ಅದರ ಉದ್ದೇಶ. ಕಳೆದ 75 ವರ್ಷಗಳಿಂದ ಆರ್.ಎಸ್.ಎಸ್ ಜನಸೇವೆ ಮಾಡುತ್ತಿದೆ. ದೇಶದಲ್ಲಿ ಹಲವು ಸಂಕಷ್ಟಗಳು ಎದುರಾದಾಗ, ಜನರು ತೊಂದರೆಗೀಡಾದಾಗ ಆರ್.ಎಸ್.ಎಸ್.ಎಸ್ ಸಹಾಯ ಮಾಡಿದೆ. ಮಾಡುತ್ತಲೂ ಇದೆ. ಇದನ್ನು ಸಹಿಸಲಾಗದೇ ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಎಲ್ಲಾ ಕಡೆ ಅಧಿಕಾರ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್.ಎಸ್.ಎಸ್ ಬಗ್ಗೆ ಅಪಪ್ರಚಾರ ಮಾಡುವುದರಲ್ಲಿ ತೊಡಗಿದ್ದಾರೆ. ಈ ರೀತಿ ಮಾಡಿದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ಕಾಂಗ್ರೆಸ್ ನೆಲೆ ಕಳೆದುಕೊಳ್ಳಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ನೀರು ಪಾಲು

Home add -Advt

Related Articles

Back to top button