ಪ್ರಗತಿವಾಹಿನಿ ಸುದ್ದಿ, ಅಥಣಿ – ಶ್ರೀಶೈಲದಲ್ಲಿ ದೀಪ ಆರಿದೆಯಂತೆ, ಪ್ರತಿಯೊಬ್ಬರೂ ಐದೈದು ಮನೆಗೆ ಹೋಗಿ ಒಂದೊಂದು ಕೊಡ ನೀರು ತಂದು ತಮ್ಮ ಮನೆಯ ಮಗನ ಮೇಲೆ ಸುರುವಬೇಕಂತೆ -ಇದು ಇಂದು ಸಂಜೆಯಿಂದ ಅಥಣಿಯಲ್ಲಿ ಹಬ್ಬಿರುವ ವಿಚಿತ್ರ ವದಂತಿ.
ಅಥಣಿಯ ಗಲ್ಲಿ ಗಲ್ಲಿಯಲ್ಲಿ ಜನ ಐದೈದು ಮನೆಗೆ ಹೋಗಿ ಒಂದೊಂದು ಕೊಡ ನೀರು ತಂದು ಮನೆಯ ಮಕ್ಕಳ ಮೇಲೆ ಸುರುವುತ್ತಿದ್ದಾರಂತೆ.
ಅಥಣಿಯ ಮಹಿಳೆ ಬಸವರಾಜೇಶ್ವರಿ ಅವರು ಪ್ರಗತಿವಾಹಿನಿಗೆ ಕರೆ ಮಾಡಿ ತಮ್ಮ ಗಾಭರಿಯಿಂದ ತಮ್ಮ ಆತಂಕ ತೋಡಿಕೊಂಡಿದ್ದಾರೆ. ಹೇಗಾದರೂ ಇದನ್ನು ತಡೆಯುವಂತೆ ಮನವಿ ಮಾಡಿದ್ದಾರೆ.
ಕೊರೋನೋ ಇರುವ ಈ ಸಂದರ್ಭದಲ್ಲಿ ಇಂತಹ ವದಂತಿ ಮತ್ತು ಇದರಿಂದ ಜನರು ಮಾಡುತ್ತಿರುವ ಮೂಢನಂಬಿಕೆಗೆ ಅವರು ತೀವ್ರ ಆಂತಕಕ್ಕೊಳಗಾಗಿದ್ದರು.
ಅಂತದ್ದೇನೂ ಆಗಿಲ್ಲ -ಶ್ರೀಶೈಲ ಪೀಠ ಸ್ಪಷ್ಟನೆ
ಶ್ರೀಶೈಲದಲ್ಲಿ ಅಂತಾದ್ದೇನು ಆಗಿಲ್ಲ. ಇಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಶ್ರೀಶೈಲ ಜಗದ್ಗುರುಗಳು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ನನಗೂ ಸಾಕಷ್ಟು ಪೋನ್ ಗಳು ಬಂದಿವೆ. ಆದರೆ ಅವೆಲ್ಲ ಕೇವಲ ವದಂತಿ. ಜನರು ಇಂತದ್ದನ್ನೆಲ್ಲ ನಂಬಬಾರದು ಎಂದು ಅವರು ವಿನಂತಿಸಿದ್ದಾರೆ.
ಸಾರ್ವಜನಿಕರು ಇಂತಹ ವದಂತಿ ನಂಬದೆ ಕೊರೋನಾದ ಈ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಾರದೆ ಸೋಂಕು ಹರಡುವುದನ್ನು ತಡೆಯಬೇಕಾಗಿದೆ. ಇದು ಪ್ರಗತಿವಾಹಿನಿಯ ಕಳಕಳಿ ಕೂಡ.
ಅಧಿಕಾರಿಗಳು ತಕ್ಷಣ ಈ ಬಗ್ಗೆ ಮಾಹಿತಿ ಪಡೆದು ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕಿದೆ. ಅಥಣಿಯ ವಿಕ್ರಮಪುರ ಭಾಗದಲ್ಲಿ ಮೊದಲು ಈ ವದಂತಿ ಆರಂಭವಾಗಿದ್ದು, ಅದು ಇತರ ಭಾಗಗಳಿಗೂ ಹಬ್ಬಿದೆ ಎಂದು ಬಸವರಾಜೇಶ್ವರಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ