
ಪ್ರಗತಿವಾಹಿನಿ ಸುದ್ದಿ: ರಷ್ಯಾದ AN-24 ವಿಮಾನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ವಿಮಾನ ಪತನಗೊಂಡಿದ್ದು ಎಲ್ಲಾ ಪ್ರಯಾನಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಷ್ಯಾದಿಂದ ಹೊರಟಿದ್ದ ವಿಮಾನ ಚೀನಾ ಗಡಿಯಲ್ಲಿ ನಾಪತ್ತೆಯಾಗಿತ್ತು. ಇದೀಗ ವಿಮಾನದ ಅವಶೇಷಗಳು ಟಿಂಡಾದಿಂದ 15 ಕಿ.ಮೀ ದೂರದಲ್ಲಿ ಇಳಿಜಾರಿನಲ್ಲಿ ಪತ್ತೆಯಾಗಿವೆ.
ಅಂಗಾರ ಏರ್ ಲೈನ್ಸ್ ನ ಈ ವಿಮಾನದಲ್ಲಿ ಐವರು ಮಕ್ಕಳು ಸೇರಿದಂತೆ 43 ಪ್ರಯಾಣಿಕರಿದ್ದರು. ಆರು ಸಿಬ್ಬಂದಿಗಳು ಇದ್ದರು. ವಿಮಾನ ಪತನ ದುರಂತದಲ್ಲಿ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.



