Kannada NewsPoliticsTravelWorld

*ಅಫ್ಘಾನಿಸ್ತಾನ ಇತಿಹಾಸದಲ್ಲೆ ಭೀಕರ ದಾಳಿ: ಪಾಕ್ ದಾಳಿಗೆ 400 ಜನರ ಸಾವು*

ಪ್ರಗತಿವಾಹಿನಿ ಸುದ್ದಿ: ಪಾಕಿಸ್ತಾನ ಅಫ್ಘಾನಿಸ್ತಾನದ ಕಾಬೂಲ್‌ನ ಆಸ್ಪತ್ರೆಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 400 ಜನರು ಸಾವನ್ನಪ್ಪಿದ್ದು, ಈ ದಾಳಿಯು ಅಫ್ಘಾನಿಸ್ತಾನದ ಇತಿಹಾಸದಲ್ಲೆ ಅತ್ಯಂತ ಭೀಕರ ದಾಳಿಯಾಗಿದೆ.

ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ ಆಸ್ಪತ್ರೆಯ ದೊಡ್ಡ ಭಾಗ ನಾಶವಾಗಿದೆ. ಈ ದಾಳಿಯಲ್ಲಿ 400 ಜನರು ಸಾವನ್ನಪ್ಪಿದ್ದು, ಸುಮಾರು 250 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ತಾಲಿಬಾನ್ ಸರ್ಕಾರ ಹೇಳಿದೆ. 

Home add -Advt

ಆದರೆ ಅಫ್ಘಾನ್ ಸರ್ಕಾರದ ಆರೋಪಗಳನ್ನು ಪಾಕಿಸ್ತಾನ ನಿರಾಕರಿಸಿದೆ. ತಾವು ಕಾಬೂಲ್‌ನಲ್ಲಿ ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಕೊಡು ದಾಳಿಯನ್ನು ನಡೆಸಿಲ್ಲ ಎಂದು ಹೇಳಿದೆ.

ಈ ವರದಿಗೂ ಕೆಲವೇ ಗಂಟೆಗಳ ಮೊದಲು ಉಭಯ ದೇಶಗಳ ಗಡಿಯಲ್ಲಿ ನಡೆಸಲಾದ ಗುಂಡಿನ ಚಕಮಕಿಯಲ್ಲಿ ಅಫ್ಘಾನಿಸ್ತಾನದಲ್ಲಿ ನಾಲ್ವರ ಸಾವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಎರಡೂ ದೇಶಗಳ ಸಂಘರ್ಷ ಮೂರನೇ ವಾರಕ್ಕೆ ಪ್ರವೇಶಿಸಿದೆ.

Related Articles

Back to top button