ಪ್ರಗತಿವಾಹಿನಿ ಸುದ್ದಿ; ಕೀವ್: ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಭೀಕರ ಯುದ್ಧ ಸಾರಿದ್ದ ರಷ್ಯಾ ಇದೀಗ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದೆ.
ಉಕ್ರೇನ್ ದೇಶಾದ್ಯಂತ ಇರುವ ವಿದೇಶಿಗರ ಸುರಕ್ಷಿತ ಸ್ಥಳಾಂತರಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಹಾಗೂ ಯುದ್ಧಪ್ರದೇಶದಿಂದ ನಾಗರಿಕರ ತೆರವು ನಿಟ್ಟಿನಲ್ಲಿ ಭಾರತೀಯ ಕಾಲಮಾನ ಬೆಳಿಗ್ಗೆ 11:30 ಗಂಟೆಯಿಂದ ರಷ್ಯಾ, ಉಕ್ರೇನ್ ನಾದ್ಯಂತ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ವೊಲ್ನೊವಾಖಾ, ಮರಿಯಪೋಲ್ ಈ ಎರಡು ನಗರಗಳಲ್ಲಿ ಮಾತ್ರ ಕದನ ವಿರಾಮ ಘೋಷಣೆಯಾಗಿದೆ.
ಉಕ್ರೇನ್ ನಲ್ಲಿರುವ ತಮ್ಮ ನಾಗರಿಕರ ರಕ್ಷಣೆ ನಿಟ್ಟಿನಲ್ಲಿ ರಷ್ಯಾ ಮೇಲೆ ಅಂತರಾಷ್ಟ್ರೀಯ ಸಮುದಾಯಗಳು ಹೇರಿದ ಒತ್ತಡದಿಂದಾಗಿ ರಷ್ಯಾ ಈ ಕದನ ವಿರಾಮ ಘೋಷಿಸಿದೆ ಎಂದು ತಿಳಿದುಬಂದಿದೆ. ಆದರೆ ಇದು ತಾತ್ಕಾಲಿಕ ಕದನ ವಿರಾಮವಾಗಿದ್ದು, ನಾಗರಿಕರ ಸ್ಥಳಾಂತರದ ಬಳಿಕ ರಷ್ಯಾ ಉಕ್ರೇನ್ ಮೇಲೆ ಮತ್ತಷ್ಟು ಯುದ್ಧ ತೀವ್ರಗೊಳಿಸುವ ಸಾಧ್ಯತೆ ಇದೆ.
ನೇರ ಪ್ರಸಾರದಲ್ಲಿಯೇ ಪುಟಿನ್ ವಿರುದ್ಧ ಕಿಡಿ; ರಾಜೀನಾಮೆ ನೀಡಿದ ರಷ್ಯಾ ಟಿವಿ ಚಾನಲ್ ಸಿಬ್ಬಂದಿಗಳು
10ನೇ ದಿನಕ್ಕೆ ಕಾಲಿಟ್ಟ ಯುದ್ಧ; ಹೊರನಡೆದ ಪ್ರಮುಖ ವಾಹಿನಿಗಳು; 9000 ರಷ್ಯನ್ ಸೈನಿಕರ ಸಾವು ಎಂದ ಉಕ್ರೇನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ