ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಅಮೆರಿಕಾ ಉಕ್ರೇನ್ ಗೆ ಬೆಂಬಲ ನೀಡಿದೆ. ರಷ್ಯಾ ಮೇಲೆ ಆರ್ಥಿಕ, ರಾಜತಾಂತ್ರಿಕ ನಿರ್ಬಂಧಗಳನ್ನು ಹೇರಿದೆ. ಮತ್ತೊಂದೆಡೆ ರಷ್ಯಾ ಜಾಗತಿಕ ಕ್ರಿಡಾ ಸಂಸ್ಥೆಗಳಿಂದಲೂ ವಿರೋಧ ಎದುರಿಸುತ್ತಿದೆ. ಈ ನಡುವೆ ಡ್ರಗ್ಸ್ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಬ್ಯಾಸ್ಕೆಟ್ ಬಾಲ್ ಆತಗಾರ್ತಿಯನ್ನು ರಷ್ಯಾ ಬಂಧಿಸಿದೆ.
ಅಮೆರಿಕಾದ ಖ್ಯಾತ ಆಟಗಾರ್ತಿಯನ್ನು ರಷ್ಯಾದ ಫೆಡರಲ್ ಕಸ್ಟಮ್ ಸರ್ವಿಸ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಯು ಎಸ್ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ತಂಡದ ಆಟಗಾರ್ತಿಯಾಗಿದ್ದು, ಎರಡು ಬಾರಿ ಒಲಂಪಿಕ್ ಚಾಂಪಿಯನ್ ಆಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಅವರ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಆದರೆ ರಷ್ಯಾ ಸುದ್ದಿಸಂಸ್ಥೆ ಅಮೆರಿಕಾದ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಬ್ರಿಟ್ನಿ ಗ್ರೈನರ್ ಎಂಬುವವರನ್ನು ಬಂಧಿಸಲಾಗಿದ್ದು, ಆರೋಪ ಸಾಬೀತಾದರೆ ರಷ್ಯಾ ಕಾನೂನಿನ ಪ್ರಕಾರ 5 ಅಥವಾ 10 ವರ್ಷ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ.
ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ; ಐವರು ಯೋಧರು ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ