ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಭೀಕರ ದಾಳಿ ಇಂದು 7ನೇ ದಿನಕ್ಕೆ ಕಾಲಿಟ್ಟಿದ್ದು, ನಿನ್ನೆ ನಡೆದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ವಿದ್ಯಾರ್ಥಿ ನವೀನ್ ಮೃತದೇಹ ಪತ್ತೆಯಾಗಿದೆ.
ನವೀನ್ ಮೃತದೇಹದ ಫೋಟೋಗಳನ್ನು ಅವರ ಸ್ನೇಹಿತರಿಗೆ ರವಾನಿಸಲಾಗಿದೆ. ಖಾರ್ಕಿವ್ ನಲ್ಲಿ ನವೀನ್ ಮೃತದೇಹವಿದ್ದು, ಇಂದು ಭಾರತಕ್ಕೆ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಉಕ್ರೇನ್ ರಾಯಭಾರ ಕಚೇರಿ ಮೂಲಕ ನವೀನ್ ಪಾರ್ಥಿವ ಶರೀರ ತರಲು ಯತ್ನ ನಡೆದಿದೆ. ಖಾರ್ಕಿವ್ ನಿಂದ ಗಡಿಗೆ ರಸ್ತೆ ಮಾರ್ಗದಲ್ಲಿ ಮೃತದೇಹ ಸಾಗಿಬರುವ ಸಾಧ್ಯತೆ ಇದ್ದು, ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ರವಾಸುವ ಸಾಧ್ಯತೆ ಇದೆ.
ನಿನ್ನೆ ನಡೆದ ರಷ್ಯಾ ಶೆಲ್ ದಾಳಿಯಲ್ಲಿ ಕನ್ನಡಿಗ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ನಿವಾಸಿ ನವೀನ್ (22) ಮೃತಪಟ್ಟಿದ್ದರು. ಖಾರ್ಕಿವ್ ನಲ್ಲಿ ನವೀನ್ ಎಂಬಿಬಿಎಸ್ ನಾಲ್ಕನೇ ವರ್ಷದಲ್ಲಿ ಓದುತ್ತಿದ್ದರು.
ಟಿವಿ ಟವರ್ ಮೇಲೆ ಬಾಂಬ್ ದಾಳಿ; 5 ಜನ ಸಾವು; ಚಾನಲ್ ಗಳು ಸಂಪೂರ್ಣ ಸ್ಥಗಿತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ