ಪ್ರಗತಿವಾಹಿನಿ ಸುದ್ದಿ; ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧ ಇಂದು 10ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಮೇಲಿನ ಯುದ್ಧ ನೀತಿ ಖಂಡಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ರಷ್ಯಾದಲ್ಲಿಯೇ ಪ್ರತಿಭಟನೆಗಳು ತೀವ್ರಗೊಂಡಿವೆ. ಈ ನಡುವೆ ಟಿವಿ ಚಾನಲ್ ಒಂದರ ಸಿಬ್ಬಂದಿಗಳು ಉಕ್ರೇನ್ ದಾಳಿ ಖಂಡಿಸಿ ನೇರಪ್ರಸಾರದಲ್ಲಿಯೇ ರಾಜೀನಾಮೆ ನೀಡಿರುವ ಘಟನೆ ನಡೆದಿದೆ.
ರಷ್ಯಾದ ಟಿವಿ ರೇನ್ ಎಂಬ ಚಾನಲ್ ಸಿಬ್ಬಂದಿ ವರ್ಗ ಉಕ್ರೇನ್ ಮೇಲಿನ ಯುದ್ಧ ಸಾರಿರುವ ಅಧ್ಯಕ್ಷ ಪುಟಿನ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ನೇರಪ್ರಸಾರದಲ್ಲಿಯೇ ರಾಜೀನಾಮೆ ನೀಡಿದ್ದಾರೆ. ನಂತರ ಮಾಧ್ಯಮ ಪ್ರಸಾರ ಸ್ಥಗಿತಗೊಂಡಿದೆ.
ಸಿಬ್ಬಂದಿಗಳು ಸ್ಟುಡಿಯೋ ತೊರೆಯುತ್ತಿದ್ದಂತೆ ಸ್ವಾನ್ ಲೇಕ್ ಬಾಲೆಟ್ ಎಂಬ ವಿಡಿಯೋ ಪ್ರಸಾರ ಮಾಡಲಾಗಿದೆ. ಈ ವಿಡಿಯೋ 1991ರಲ್ಲಿ ಸೋವಿಯತ್ ಯುನಿಯನ್ ಪತನವಾದಾಗ ರಷ್ಯಾದಲ್ಲಿ ಸರ್ಕಾರಿ ಟಿವಿ ಚಾನಲ್ ಗಳಲ್ಲಿ ತೋರಲಾಗಿತ್ತು. ಇದೀಗ ಅದೇ ವಿಡಿಯೋ ಉಕ್ರೇನ್ ಮೇಲಿನ ರಷ್ಯಾ ಯುದ್ಧ ಖಂಡಿಸಿ ಪ್ರಸಾರ ಮಾಡಲಾಗುತ್ತಿದೆ.
10ನೇ ದಿನಕ್ಕೆ ಕಾಲಿಟ್ಟ ಯುದ್ಧ; ಹೊರನಡೆದ ಪ್ರಮುಖ ವಾಹಿನಿಗಳು; 9000 ರಷ್ಯನ್ ಸೈನಿಕರ ಸಾವು ಎಂದ ಉಕ್ರೇನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ