Latest

ಭೂತಾಯಿ ಮಡಿಲಲ್ಲಿ ಚಿರ ನಿದ್ರೆಗೆ ಜಾರಿದ ಗಾಯಕ ಎಸ್ ಪಿಬಿ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಖ್ಯಾತ ಗಾಯಕ, ಸ್ವರ ಸಾಮ್ರಾಟ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಚೆನ್ನೈನ ತಾಮರೈಪಾಕಂ ನಲ್ಲಿರುವ ರೆಡ್ ಹಿಲ್ ಫಾರ್ಮ್ ಹೌಸ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನರಾಗಿದ್ದರು. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆಯನ್ನು ಇಂದು ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಾಮರಪಾಕಂ ತೋಟದ ಮನೆಯಲ್ಲಿ ನೆರವೇರಿಸಲಾಯಿತು. ಶೈವ ಆರಾಧ್ಯ ಸಂಪ್ರದಾಯದಂತೆ ಹೈದರಾಬಾದ್ ನ ಪುರೋಹಿತರ ಮಾರ್ಗದರ್ಶನದಲ್ಲಿ ಎಸ್ ಪಿ ಬಿ ಪುತ್ರ ಚರಣ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

Home add -Advt

ಬಳಿಕ ಪೊಲೀಸರಿಂದ ಕುಶಾಲತೋಪು ಸಿಡಿಸುವ ಮೂಲಕ ಎಸ್ ಪಿಬಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

Related Articles

Back to top button