ಪ್ರಗತಿವಾಹಿನಿ ಸುದ್ದಿ, ತಿರುವನಂತನಪುರಂ: ಶಬರಿಮಲೆಗೆ ಬರುವ ಭಕ್ತಾದಿಗಳಿಗೆ ಹೊಸ ಕಟ್ಟಳೆ ವಿಧಿಸಲಾಗಿದೆ.
ಕೇರಳ ಹೈಕೋರ್ಟ್ ಈ ಕುರಿತು ಸೂಚನೆ ನೀಡಿದ್ದು, ಸೆಲೆಬ್ರಿಟಿಗಳ ಫೋಟೋ, ಪೋಸ್ಟರ್ ಗಳನ್ನು ಹಿಡಿದುಕೊಂಡು ಬಂದರೆ ಅಂಥವರಿಗೆ ಸನ್ನಿಧಾನ ಪ್ರವೇಶಕ್ಕೆ ಅವಕಾಶ ನೀಡಬಾರದೆಂದು ತೀರ್ಪು ನೀಡಿದೆ.
ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ. ಅಜಿತ್‌ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಯಾತ್ರಾರ್ಥಿಯೊಬ್ಬರ ದೂರಿನ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನಡೆಸಿ ತಿರುವಾಂಕೂರು ದೇವಸ್ವಂ ಮಂಡಳಿಗೆ ಪ್ರತಿಯೊಬ್ಬ ಅಯ್ಯಪ್ಪನ ಭಕ್ತ ತನ್ನ ಪೂಜಾ ಆರಾಧನವನ್ನು ಪದ್ಧತಿಯಂತೆ, ಸಾಂಪ್ರದಾಯಿಕ ವಿಧಿಗಳಂತೆ ಮಾಡುವುದನ್ನು ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದೆ.
ಯಾವ ಭಕ್ತರೂ ಕೂಡ ಸಿನಿಮಾ ತಾರೆಯರ ಫೋಟೋ, ರಾಜಕಾರಣಿಗಳ ಫೋಟೋ, ಬ್ಯಾನರ್ ಯಾವುದನ್ನು ದೇವರ ದರ್ಶನ ಪಡೆಯುವ ವೇಳೆ ತರುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ವಿಪರೀತವಾಗುತ್ತಿದ್ದ ಸೆಲೆಬ್ರಿಟಿಗಳ ಫೋಟೊ ಹಿಡಿದು ಬರುವ ಭಕ್ತರ ಚಾಳಿಗೆ ಕಡಿವಾಣ ಬಿದ್ದಂತಾಗಿದೆ.
ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಯುವ ಹಬ್ಬ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ
https://pragati.taskdun.com/arrangements-are-also-made-for-school-students-to-watch-national-youth-festival-live/
ಮೋದಿ ರಾಜ್ಯಕ್ಕೆ ಬರುತ್ತಿರುವುದು ಯುವಜನೋತ್ಸವಕ್ಕಲ್ಲ, ಯುವಜನ ನಾಶೋತ್ಸವಕ್ಕೆ : ಸಿದ್ದರಾಮಯ್ಯ ವಾಗ್ದಾಳಿ
https://pragati.taskdun.com/modi-is-coming-to-the-state-not-for-the-festival-of-youth-but-for-the-destruction-of-youth-siddaramaiah-lashed-out/
ಯುವಜನೋತ್ಸವಕ್ಕೆ ನಾಳೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ
https://pragati.taskdun.com/prime-minister-modi-will-inaugurate-the-youth-festival-tomorrow/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ